ಭೋಪಾಲ್: ಭಾರತದ ವಿರುದ್ಧ ಘೋಷಣೆಗಳನ್ನು ಕೂಗುವವರನ್ನು ಕಂಬಿಗಳ ಹಿಂದೆ ಕಳುಹಿಸಲಾಗುವುದು ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಜಬಲ್ಪುರದಲ್ಲಿ ನಡೆದ ಸಮಾವೇಶದಲ್ಲಿ ಹೇಳಿದರು. ಇದೇ ವೇಳೆ, ಕೇವಲ ನಾಲ್ಕು ತಿಂಗಳಲ್ಲಿ ಅಯೋಧ್ಯೆಯಲ್ಲಿ ಆಕಾಶದಷ್ಟು ಎತ್ತರದ ರಾಮ ಮಂದಿರವನ್ನು ನಿರ್ಮಿಸಲಾಗುವುದು ಎಂದು ಅವರು ಘೋಷಿಸಿದರು.
“ಕೆಲವು ವಿದ್ಯಾರ್ಥಿಗಳು ಜೆಎನ್ಯುನಲ್ಲಿ ‘ಭಾರತ್ ತೇರೆ ತುಕ್ಡೆ ಹೊಂಗೆ ಇಕ್ ಹಜಾರ್, ಇನ್ ಶಾ ಅಲ್ಲಾ ಇನ್ ಶಾ ಅಲ್ಲಾ ’ಎಂಬ ಭಾರತ ವಿರೋಧಿ ಘೋಷಣೆಗಳನ್ನು ಎತ್ತಿದ್ದರು. ಅವರನ್ನು ಜೈಲಿಗೆ ಹಾಕಬೇಕಲ್ಲವೇ? ರಾಷ್ಟ್ರ ವಿರೋಧಿ ಘೋಷಣೆಗಳನ್ನು ಎತ್ತುವವರನ್ನು ಕಂಬಿಗಳ ಹಿಂದೆ ಕಳುಹಿಸಲಾಗುವುದು” ಎಂದು ಸಿಎಎ ಪರ ಸಮಾವೇಶದಲ್ಲಿ ಶಾ ಹೇಳಿದರು.
ರಾಮ ದೇವಾಲಯದ ನಿರ್ಮಾಣವನ್ನು ತಡೆಯುವಂತೆ ಕಾಂಗ್ರೆಸ್ ಪಕ್ಷಕ್ಕೆ ಸವಾಲು ಹಾಕಿದ ಅವರು, “ರಾಮ ಮಂದಿರವನ್ನು ನಿರ್ಮಿಸಬೇಕೇ ಅಥವಾ ಬೇಡವೇ? ಇದನ್ನು ನಿರ್ಮಿಸಬಾರದು ಎಂದು ಕಾಂಗ್ರೆಸ್ ಮುಖಂಡ ಮತ್ತು ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ. ಸಿಬಲ್ ಭಾಯ್, ನಿಮಗೆ ಸಾಧ್ಯವಾದರೆ ಅದನ್ನು ನಿಲ್ಲಿಸಿ. ಮುಂದಿನ ನಾಲ್ಕು ತಿಂಗಳಲ್ಲಿ ಆಕಾಶದ ಎತ್ತರದ ರಾಮ ದೇವಾಲಯ ನಿರ್ಮಾಣವಾಗಲಿದೆ” ಎಂದಿದ್ದಾರೆ.
ಸಿಎಎಯಲ್ಲಿ ಯಾವುದೇ ಭಾರತೀಯರ ಪೌರತ್ವವನ್ನು ಕಸಿದುಕೊಳ್ಳುವಂತಹ ಒಂದೇ ಒಂದು ನಿಬಂಧನೆಯನ್ನು ಇದ್ದರೆ ತೋರಿಸಿ ಕೊಡಿ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಮಮತಾ ಬ್ಯಾನರ್ಜಿ ಅವರಿಗೆ ಶಾ ಸವಾಲು ಹಾಕಿದರು.
“ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳು ಸಿಎಎ ವಿಷಯದಲ್ಲಿ ರಾಷ್ಟ್ರವನ್ನು ದಾರಿ ತಪ್ಪಿಸುತ್ತಿವೆ ಮತ್ತು ಅಲ್ಪಸಂಖ್ಯಾತರನ್ನು ಪ್ರಚೋದಿಸುತ್ತಿವೆ” ಎಂದು ಅವರು ಆರೋಪಿಸಿದರು. “ಸ್ವಾತಂತ್ರ್ಯದ ನಂತರ, ಕಾಂಗ್ರೆಸ್ ದೇಶವನ್ನು ಧರ್ಮದ ಆಧಾರದ ಮೇಲೆ ವಿಭಜಿಸಿತು. ಪೂರ್ವ ಮತ್ತು ಪಶ್ಚಿಮ ಪಾಕಿಸ್ಥಾನಗಳಲ್ಲಿ ವಾಸಿಸುತ್ತಿದ್ದ ಹಿಂದೂಗಳು, ಸಿಖ್ಖರು, ಪಾರ್ಸಿಗಳು ಮತ್ತು ಜೈನರು ಭಾರತಕ್ಕೆ ಮರಳಲು ಬಯಸಿದ್ದರು, ಆದರೆ ರಕ್ತಪಾತದ ಕಾರಣ ಅವರು ಅಲ್ಲಿಯೇ ಉಳಿದರು. ನಮ್ಮ ದೇಶದ ನಾಯಕರುಗಳು ಅವರನ್ನು ಇಲ್ಲಿಗೆ ಸ್ವಾಗತಿಸಲಾಗುವುದು ಮತ್ತು ಅವರಿಗೆ ಬೇಕಾದಾಗ ಪೌರತ್ವ ನೀಡಲಾಗುವುದು ಎಂದು ಭರವಸೆ ನೀಡಿದ್ದರು” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.