ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಗುರುವಾರ ಬಂಧಿಸಲ್ಪಟ್ಟ ಮೂವರು ಇಸಿಸ್ ಭಯೋತ್ಪಾದಕರು ಸಿರಿಯಾ ಮತ್ತು ಮಲೇಷ್ಯಾದ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸ್ ಮೂಲಗಳು ಶನಿವಾರ ತಿಳಿಸಿವೆ.
ಸಿರಿಯಾ ಇಸಿಸ್ನ ಭದ್ರಕೋಟೆಯಾಗಿದೆ. ರಾಷ್ಟ್ರ ವಿರೋಧಿ ಚಟುವಟಿಕೆಗಳನ್ನು ನಡೆಸಿದ ಪ್ರಧಾನ ಆರೋಪಿ ಝಾಕಿರ್ ನಾಯಕ್ ಭಾರತದಿಂದ ಪಲಾಯನ ಮಾಡಿದ ನಂತರ ಹಲವು ವರ್ಷಗಳಿಂದ ಮಲೇಷ್ಯಾದಲ್ಲಿ ವಾಸಿಸುತ್ತಿದ್ದಾನೆ. ಈ ಭಯೋತ್ಪಾದಕರಿಗೆ ಆತನ ನಂಟಿದೆ ಎನ್ನಲಾಗಿದೆ.
ದೆಹಲಿ ಪೊಲೀಸರ ವಿಶೇಷ ಘಟಕದ ಬಲೆಗೆ ಗುರುವಾರ ಸಿಕ್ಕಿಬಿದ್ದ ಇಸಿಸ್ ಬೆಂಬಲಿತ ಮೂವರು ಭಯೋತ್ಪಾದಕರ ಉದ್ದೇಶಗಳು ಅತ್ಯಂತ ಅಪಾಯಕಾರಿಯಾಗಿದೆ ಎಂದು ಮೂಲಗಳು ತಿಳಿಸಿವೆ
“ಕರ್ನಾಟಕ, ಕೇರಳ, ಬಿಹಾರ, ಮಧ್ಯಪ್ರದೇಶ, ತಮಿಳುನಾಡು, ಜಮ್ಮು ಮತ್ತು ಕಾಶ್ಮೀರ, ತೆಲಂಗಾಣ ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸ್ ತಂಡಗಳು ದೆಹಲಿ ಪೊಲೀಸರ ವಿಶೇಷ ಘಟಕದಿಂದ ಬಂಧಿಸಲ್ಪಟ್ಟ ಮೂವರು ಭಯೋತ್ಪಾದಕರನ್ನು ವಿಚಾರಣೆ ನಡೆಸುತ್ತಿವೆ. ಆರ್ & ಎಡಬ್ಲ್ಯೂ ಮತ್ತು ಐಬಿ ಅಧಿಕಾರಿಗಳ ಸಮ್ಮುಖದಲ್ಲಿ ವಿಚಾರಣೆ ನಡೆಯುತ್ತಿದೆ” ಎಂದು ಈಶಾನ್ಯ ದೆಹಲಿಯ ವಾಜೀರಾಬಾದಿನಲ್ಲಿ ನಡೆದ ಎನ್ಕೌಂಟರ್ ಸಮಯದಲ್ಲಿ ಮೂವರು ಭಯೋತ್ಪಾದಕರನ್ನು ಬಂಧಿಸಿದ ದೆಹಲಿ ಪೊಲೀಸ್ ವಿಶೇಷ ಘಟಕ ಹೇಳಿದೆ.
ಬೆಂಗಳೂರಿನಲ್ಲೂ ಗುರುವಾರ ಮೂವರು ಭಯೋತ್ಪಾದಕರನ್ನು ಪೊಲೀಸರು ಬಂಧಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.