ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಜೀವನದ ಕುರಿತಾದ ‘ಕರ್ಮಯೋದ್ಧಾ ಗ್ರಂಥ’ವನ್ನು ಗೃಹ ಸಚಿವ ಅಮಿತ್ ಶಾ ಅವರು ಮಂಗಳವಾರ ನವದೆಹಲಿಯಲ್ಲಿ ಅನಾವರಣಗೊಳಿಸಿದರು.
ಈ ವೇಳೆ ಮಾತನಾಡಿದ ಅಮಿತ್ ಶಾ ಅವರು, “ಪ್ರಧಾನಿ ನರೇಂದ್ರ ಮೋದಿಯವರು ಓಲೈಕೆ, ಜಾತಿವಾದ ಮತ್ತು ಸ್ವಜನ ಪಕ್ಷಪಾತವೆಂಬ ಭಾರತೀಯ ರಾಜಕಾರಣದ ಮೂರು ಶಾಪಗಳನ್ನು ತೆಗೆದುಹಾಕಿದ್ದಾರೆ. ಅವರು ನಿಜವಾದ ಕರ್ಮಯೋದ್ಧಾ” ಎಂದಿದ್ದಾರೆ.
“ಜನಪ್ರಿಯತೆ ಕಡಿಮೆ ಆಗುವ ಅಂಜಿಕೆ ಇಲ್ಲದೆ ಸಮಾಜಕ್ಕೆ ಯಾವುದು ಅವಶ್ಯಕವೋ ಅದನ್ನು ನೀಡುವುದರಲ್ಲಿ ಮೋದಿಯವರು ನಂಬಿಕೆಯನ್ನು ಇಟ್ಟಿದ್ದಾರೆ. ಹಿಂದಿನ ಸರ್ಕಾರಗಳು ಓಲೈಕೆ ರಾಜಕಾರಣದಿಂದಾಗಿ ತೆಗೆದುಕೊಳ್ಳದ ಹಲವಾರು ನಿರ್ಣಾಯಕ ನಿರ್ಧಾರಗಳನ್ನು ಮೋದಿ ಸರ್ಕಾರ ತೆಗೆದುಕೊಂಡಿದೆ” ಎಂದಿದ್ದಾರೆ.
“ಮೋದಿ ಅವರು ಕರ್ಮಯೋದ್ಧಾ ಮತ್ತು ಜನರಿಗಾಗಿ ಮಿಡಿಯುವ ಹೃದಯವನ್ನು ಹೊಂದಿರುವ ವ್ಯಕ್ತಿ, ರಾಜಕಾರಣಿ, ಕಠಿಣ ಕಾರ್ಯವನ್ನು ಮಾಡುವ ಮಾಸ್ಟರ್, ಸಮರ್ಥ ನಿರ್ವಾಹಕ ಮತ್ತು ಕಾರ್ಯತತ್ಪರತೆಯಿಂದ ದೇಶ ಮುನ್ನಡೆಸುವ ಆದರ್ಶ ನಾಯಕ. ಈ ಎಲ್ಲ ಗುಣಗಳನ್ನು ಮೋದಿ ನಿರೂಪಿಸಿ ತೋರಿಸಿದ್ದಾರೆ” ಎಂದು ಹೇಳಿದ್ದಾರೆ.
“ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ಭಾರತವು ಹಲವು ನಿರ್ಣಾಯ ನಿರ್ಧಾರಗಳನ್ನು ತೆಗೆದುಕೊಂಡು ಜಾಗತಿಕ ಮಟ್ಟದಲ್ಲಿ ಪ್ರಬಲ ರಾಷ್ಟ್ರವಾಗಿ ಹೊರಹೊಮ್ಮಿದೆ, ತನ್ನ ಮೇಲೆ ನಡೆಯು ಆಕ್ರಮಣವನ್ನು ನಮ್ಮ ದೇಶ ಎಂದೂ ಸಹಿಸಿಕೊಳ್ಳುವುದಿಲ್ಲ ಎಂಬ ತಮ್ಮ ಸ್ಪಷ್ಟ ನಿಲುವನ್ನು ಭಾರತ ಸ್ಪಷ್ಟಪಡಿಸಿದೆ” ಎಂದಿದ್ದಾರೆ.
ಪಕ್ಷದ ಪ್ರಣಾಳಿಕೆಯನ್ನು ಕೇಂದ್ರ ಬಿಂದುವಾಗಿಟ್ಟುಕೊಂಡು ಆಡಳಿತವನ್ನು ಮಾಡುವ ಮೂಲಕ ಮೋದಿ ಸರ್ಕಾರ ಆಡಳಿತ ನಿರೂಪಣೆಯನ್ನು ಬದಲಾಯಿಸಿದೆ ಮತ್ತು ಪರಿಣಾಮಗಳನ್ನು ಲೆಕ್ಕಿಸದೆ ಜನರ ಕಲ್ಯಾಣಕ್ಕಾಗಿ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಂಡಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.