ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರು ನಡೆಸಲಿರುವ ಪರೀಕ್ಷಾ ಪೇ ಚರ್ಚಾ 2020 ಕಾರ್ಯಕ್ರಮದಲ್ಲಿ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಜಂಬಲದಿನ್ನಿ ಗ್ರಾಮದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಪೂರ್ಣಿಮಾ ರೇವಣಸಿದ್ದಪ್ಪ ನಾಶಿ ಭಾಗಿಯಾಗುತ್ತಿದ್ದಾಳೆ. ಜನವರಿ 20ರಂದು ದೆಹಲಿಯಲ್ಲಿ ‘ಪರೀಕ್ಷಾ ಪೇ ಚರ್ಚಾ’ ಕಾರ್ಯಕ್ರಮ ನಡೆಯಲಿದೆ.
ನಮ್ಮ ಕನಸು, ಭವಿಷ್ಯ ಮತ್ತು ಪರೀಕ್ಷೆಯ ಕುರಿತು ಪ್ರಬಂಧವನ್ನು ಬರೆದಿದ್ದ ಪೂರ್ಣಿಮಾ ರೇವಣಸಿದ್ದಪ್ಪ ನಾಶಿ ಪ್ರಧಾನಿಯೊಂದಿಗೆ ಸಂವಾದವನ್ನು ನಡೆಸಲು ಆಯ್ಕೆಯಾಗಿದ್ದು, ಜನವರಿ 16 ರಂದು ಬೆಂಗಳೂರಿಗೆ ಬಂದು ವರದಿ ಮಾಡಿಕೊಳ್ಳುವಂತೆ ಈಕೆಗೆ ಇ-ಮೇಲ್ ಬಂದಿದೆ. ಕರ್ನಾಟಕ ಸಮಗ್ರ ಶಿಕ್ಷಣ ಕಾರ್ಯಕ್ರಮದ ಅಧಿಕಾರಿ ಈ ಮಾಹಿತಿಯನ್ನು ಆಕೆಗೆ ನೀಡಿದ್ದಾರೆ.
ಬಾಲಕಿಯ ಬಗೆಗಿನ ಮಾಹಿತಿಯನ್ನು ಇ-ಮೇಲ್ ಮಾಡುವಂತೆ ಶಾಲೆಯ ಮುಖ್ಯಸ್ಥರಿಗೆ ಸೂಚನೆ ಬಂದಿದೆ. ವಿದ್ಯಾರ್ಥಿನಿಯ ಮಾಹಿತಿಯುಳ್ಳ ಅರ್ಜಿ ಫಾರ್ಮ್ ಭರ್ತಿ ಮಾಡಿ ಮುಖ್ಯ ಶಿಕ್ಷಕ ಶಿವಶಂಕರ್ ಬಿಂಜವಾಡಗಿ ಅವರು ಬೆಂಗಳೂರು ಕಚೇರಿಗೆ ಕಳುಹಿಸಿದ್ದಾರೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಜೊತೆ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಅವಕಾಶ ಸಿಕ್ಕಿರುವುದಕ್ಕೆ ಈ ಬಾಲಕಿ ತುಂಬಾ ಸಂತೋಷಗೊಂಡಿದ್ದಾಳೆ. ಈ ಗ್ರಾಮೀಣ ಪ್ರತಿಭೆಗೆ ಅವಕಾಶ ಸಿಕ್ಕಿರುವುದಕ್ಕೆ ನಾಡಿಗೆ, ಜಿಲ್ಲೆ, ಶಾಲೆಯ ಶಿಕ್ಷಕರಿಗೆ ಹಾಗೂ ಕುಟುಂಬದವರಿಗೆ ಕೂಡ ಸಂತಸ ತಂದಿದೆ.
ಪ್ರಧಾನಿಯ ಜೊತೆ ಹಲವಾರು ರಾಜ್ಯಗಳ ವಿದ್ಯಾರ್ಥಿಗಳು ಸಂವಾದವನ್ನು ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.