ನವದೆಹಲಿ: ಜೆಎನ್ಯುನಲ್ಲಿ ನಡೆಯುತ್ತಿರುವ ದಾಂಧಲೆಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆಯನ್ನು ನೀಡಿರುವ ಕೇಂದ್ರ ವಿದೇಶಾಂಗ ಸಚಿವೆ ಎಸ್. ಜೈಶಂಕರ್ ಅವರು, “ನಾನು ಓದಿದ್ದು ಜವಹಾರ್ ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲೇ. ಆದರೆ ನಾವಿರುವಾಗ ಅಲ್ಲಿ ‘ತುಕ್ಡೇ ತುಕ್ಡೇ’ ಗ್ಯಾಂಗ್ ಇರಲಿಲ್ಲ’ ಎಂದಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, “ಜೆಎನ್ಯು ಕ್ಯಾಂಪಸಿನಲ್ಲಿ ನಡೆದ ಹೇಳಿಕೆ ಬಗ್ಗೆ ನಿನ್ನೆ ಏನು ಹೇಳಿದ್ದೆನೋ ಅದನ್ನು ಇವತ್ತು ಕೂಡ ಹೇಳುತ್ತೇನೆ. ನಾವು ಕಲಿತದ್ದು ಅಲ್ಲೇ ಆದರೆ ನಾವೆಂದೂ ಅಲ್ಲಿ ‘ತುಕ್ಡೇ ತುಕ್ಡೇ’ ಗ್ಯಾಂಗ್ ಅನ್ನು ನೋಡಿಲ್ಲ” ಎಂದಿದ್ದಾರೆ.
ಜೆಎನ್ಯು ಆವರಣದಲ್ಲಿ ನಡೆದ ದಾಂಧಲೆಯನ್ನು ನಿನ್ನೆ ಖಂಡಿಸಿದ್ದ ಸಚಿವರು, “ಜೆಎನ್ಯುನಲ್ಲಿ ಏನು ನಡೆಯುತ್ತಿದೆ ಎಂಬುದರ ಚಿತ್ರಗಳನ್ನು ನೋಡಿದ್ದೇನೆ. ಹಿಂಸಾಚಾರವನ್ನು ನಿಸ್ಸಂದಿಗ್ಧವಾಗಿ ಖಂಡಿಸುತ್ತೇನೆ. ಇದು ವಿಶ್ವವಿದ್ಯಾಲಯದ ಸಂಪ್ರದಾಯ ಮತ್ತು ಸಂಸ್ಕೃತಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ” ಎಂದು ಅವರು ಟ್ವೀಟ್ ಮಾಡಿದ್ದರು.
ಜೆಎನ್ಯು ಆವರಣದಲ್ಲಿ ನಡೆದ ದಾಂಧಲೆಗೆ ದೇಶವ್ಯಾಪಿಯಾಗಿ ಭಾರೀ ಖಂಡನೆಗಳು ವ್ಯಕ್ತವಾಗಿವೆ. ದಾಂಧಲೆ ನಡೆಸಿದವರ ಬಗ್ಗೆ ಇನ್ನೂ ಯಾವುದೇ ಗುರುತುಗಳು ಪತ್ತೆಯಾಗಿಲ್ಲ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.
ಇನ್ನೊಂದೆಡೆ ದಾಂಧಲೆಗೆ ಸಂಬಂಧಿಸಿದಂತೆ ಭಾರೀ ಚರ್ಚೆ, ವಾಗ್ವಾದಗಳು ದೇಶವ್ಯಾಪಿಯಾಗಿ ಭುಗಿಲೆದ್ದಿವೆ. ಬಲಪಂಥೀಯ ಮತ್ತು ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ಪರಸ್ಪರ ದೋಷಾರೋಪ ಮಾಡುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.