ನವದೆಹಲಿ: ಅಯೋಧ್ಯೆಯಲ್ಲಿ ರಾಮ ದೇವಾಲಯ ನಿರ್ಮಾಣ ಮಾಡುವ ಉತ್ಸಾಹವನ್ನು ಪುನರುಜ್ಜೀವನಗೊಳಿಸುವ ಸಲುವಾಗಿ, ವಿಶ್ವ ಹಿಂದೂ ಪರಿಷತ್ (ವಿಎಚ್ಪಿ) ತೊಂಬತ್ತರ ದಶಕದಲ್ಲಿ ರಾಮ ದೇಗುಲ ಚಳುವಳಿಯ ಉತ್ತುಂಗದಲ್ಲಿ ದೇವಾಲಯಕ್ಕೆ ಇಟ್ಟಿಗೆಗಳನ್ನು ಕೊಡುಗೆ ನೀಡಿದ 2.75 ಲಕ್ಷ ಗ್ರಾಮಗಳಿಗೆ ಭೇಟಿ ನೀಡಲಿದೆ.
ಈ ಗ್ರಾಮಗಳಿಗೆ ತೆರಳಿ, ದೇವಾಲಯಕ್ಕೆ ನೀಡಿದ ಕೊಡುಗೆಯ ಸಂಕೇತವಾಗಿ ತಮ್ಮ ಮನೆಗಳಲ್ಲಿ ಶ್ರೀ ರಾಮನ ವಿಗ್ರಹವನ್ನು ಸ್ಥಾಪಿಸುವಂತೆ ವಿಹೆಚ್ಪಿ ಕಾರ್ಯಕರ್ತರು ಮನವಿಯನ್ನು ಮಾಡಿಕೊಳ್ಳಲಿದ್ದಾರೆ.
ವಿಹೆಚ್ಪಿ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಾಲ್ ಅವರು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು, “ಈ ಅಭಿಯಾನವು ಮಾರ್ಚ್ 25 ರಿಂದ ಪ್ರಾರಂಭವಾಗಲಿದೆ (ಇದು ಹಿಂದೂ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ) ಮತ್ತು ಏಪ್ರಿಲ್ 8 ರಂದು ರಾಮನವಮಿವರೆಗೆ ಮುಂದುವರಿಯುತ್ತದೆ” ಎಂದು ಹೇಳಿದ್ದಾರೆ.
ರಾಮ ದೇಗುಲದ ನಿರ್ಮಾಣಕ್ಕಾಗಿ ಸುಪ್ರೀಂ ಕೋರ್ಟ್ ಸಮ್ಮತಿ ನೀಡಿದ ಎರಡು ತಿಂಗಳ ನಂತರ ವಿಹೆಚ್ಪಿಯ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ವಿಹೆಚ್ಪಿ ನಾಯಕನ ಪ್ರಕಾರ,” ಈ ಅಭಿಯಾನದ ಅವಧಿಯನ್ನು ರಾಮೋತ್ಸವ ಎಂದು ಆಚರಿಸಲಾಗುತ್ತದೆ. ಈ ಬಾರಿ ಇದನ್ನು ವಿಜೃಂಭಣೆಯಿಂದ ನಡೆಸಲಾಗುತ್ತದೆ. ವಿಹೆಚ್ಪಿ ಕಾರ್ಯಕರ್ತರು 1.25 ಲಕ್ಷ ಹಳ್ಳಿಗಳಿಗೆ ತೆರಳಲಿದ್ದಾರೆ. ರಾಮ ಮಂದಿರ ಚಳವಳಿಯ ಉತ್ತುಂಗದಲ್ಲಿ ಮಂದಿರ ನಿರ್ಮಾಣಕ್ಕೆ ಇಟ್ಟಿಗೆ ಮತ್ತು ದೇಣಿಗೆ ನೀಡಿದ ಪ್ರತಿ ಹಿಂದೂ ಮನೆಯನ್ನೂ ತಲುಪುವುದು ಇವರ ಉದ್ದೇಶವಾಗಿದೆ. “ಎಂದಿದ್ದಾರೆ.
ಈ ಮಂದಿರ ಹಲವಾರು ಹಿಂದೂಗಳ ನಂಬಿಕೆಯೊಂದಿಗೆ ಬೆಸೆದುಕೊಂಡಿದೆ, ಹೀಗಾಗಿ ಇದನ್ನು ದೇಣಿಗೆಯೊಂದಿಗೆ ನಿರ್ಮಿಸಬೇಕು ಎಂದು ಬನ್ಸಾಲ್ ಹೇಳಿದ್ದಾರೆ. “ನಾವು 1989 ರಲ್ಲಿ ಮಾಡಿದಂತೆ ಮತ್ತೊಮ್ಮೆ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ ನಿರೀಕ್ಷೆಯಿದೆ” ಎಂದು ಅವರು ಹೇಳಿದ್ದಾರೆ.
ಅಭಿಯಾನದ ವೇಳೆ, ವಿಹೆಚ್ಪಿ ಸಣ್ಣ ಮತ್ತು ದೊಡ್ಡ ದೇವಾಲಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಿದೆ, ಅದೇ ಸಮಯದಲ್ಲಿ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡಲಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.