ನವದೆಹಲಿ: ಕೇಂದ್ರ ಗೃಹ ಸಚಿವಾಲಯ ಮಂಗಳವಾರ ವಿದೇಶಗಳಿಂದ ವಿಶೇಷವಾಗಿ ಗಲ್ಫ್ ರಾಷ್ಟ್ರಗಳಿಂದ ಇಸ್ಲಾಮಿಕ್ ಮೂಲಭೂತವಾದಿ ಸಂಘಟನೆಗಳಿಗೆ ಹರಿದು ಬರುತ್ತಿರುವ ಧನಸಹಾಯದ ಬಗ್ಗೆ ವಿವರಗಳನ್ನು ನೀಡುವಂತೆ ರಾಜ್ಯಗಳು ಮತ್ತು ಗುಪ್ತಚರ ಸಂಸ್ಥೆಗಳಿಗೆ ಸೂಚನೆಯನ್ನು ನೀಡಿದೆ.
ಕಳೆದ ಐದು ವರ್ಷಗಳಲ್ಲಿ ಧನ ಸಹಾಯ ಪಡೆದ ಇಸ್ಲಾಮಿಕ್ ಸಂಘಟನೆಗಳ ಹೆಸರುಗಳು ಮತ್ತು ಈ ಗುಂಪುಗಳು ಪಡೆದ ಹಣದ ಮೊತ್ತದ ಬಗ್ಗೆ ಸಚಿವಾಲಯವು ವಿವರವಾದ ಮಾಹಿತಿಯನ್ನು ಕೋರಿದೆ. ಸಚಿವಾಲಯವು ಅದರ ಚಟುವಟಿಕೆಗಳ ಬಗೆಗಿನ ವಿವರಗಳನ್ನೂ ಸಹ ಕೋರಿದೆ.
ಕೇರಳ ಮೂಲದ ಇಸ್ಲಾಮಿಕ್ ಮೂಲಭೂತ ಸಂಘಟನೆಯು ಯುನೈಟೆಡ್ ಅರಬ್ ಎಮಿರೇಟ್ಸ್, ಟರ್ಕಿ ಮತ್ತು ಕತಾರ್ನಿಂದ ಹಣವನ್ನು ಪಡೆದ ಕೆಲವು ನಿದರ್ಶನಗಳು ಬೆಳಕಿಗೆ ಬಂದ ನಂತರ ಸಚಿವಾಲಯ ವಿವರಗಳನ್ನು ಕೋರಿದೆ ಎಂದು ಮೂಲಗಳು ತಿಳಿಸಿವೆ.
“ಸೆಪ್ಟೆಂಬರ್ 19 ರಂದು, ಮೂಲಭೂತವಾದಿ ಇಸ್ಲಾಮಿಕ್ ಸಂಘಟನೆಯ ಹಿರಿಯ ಸದಸ್ಯರು ದುಬೈಗೆ ಭೇಟಿ ನೀಡಿದ್ದರು, ಅಲ್ಲಿ ಮೂಲಭೂತವಾದಿ ಸಿದ್ಧಾಂತಗಳನ್ನು ಹರಡಲು ಅವರಿಗೆ 40 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ. ಇಸ್ಲಾಮಿಕ್ ಗುಂಪೊಂದು ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದೆ ಎಂದು” ಎಂದು ಹಿರಿಯ ಐಪಿಎಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಇದೇ ರೀತಿಯ ಮತ್ತೊಂದು ಘಟನೆ ಭಾರತೀಯ ಭದ್ರತಾ ಸಂಸ್ಥೆಯ ಗಮನಕ್ಕೆ ಬಂದಿದ್ದು, ಅದೇ ಸಂಘಟನೆಯ ಸದಸ್ಯರು ಕತಾರ್, ಟರ್ಕಿಯ ಕೆಲವು ಜನರನ್ನು ಭೇಟಿಯಾಗಿ ಜಿಹಾದ್ ಹರಡಲು ಹಣ ಸಂಗ್ರಹಿಸಿದ್ದಾರೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಸಿಕ್ಕಿದೆ.
ಈಗಾಗಲೇ ಕೇರಳದ ಹಲವು ಮಂದಿ ಯುವಕರು ದೇಶವನ್ನು ತೊರೆದು ಇಸಿಸ್ ಸೇರ್ಪಡೆಗೊಂಡಿದ್ದಾರೆ. ಹಲವು ಯುವಕರು ಭಯೋತ್ಪಾದನೆಯತ್ತ ವಾಲುತ್ತಿದ್ದಾರೆ. ಈ ಸಂದರ್ಭದಲ್ಲಿ ಸರ್ಕಾರಗಳು ಗಂಭೀರವಾದ ಕ್ರಮಗಳನ್ನು ತೆಗೆದುಕೊಳ್ಳುವ ಅವಶ್ಯಕತೆಯಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.