ನವದೆಹಲಿ: ಚಂದ್ರಯಾನ -3 ಯೋಜನೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಮತ್ತು ಇಸ್ರೋ ವಿಜ್ಞಾನಿಗಳು ಪ್ರಸ್ತುತ ಈ ಮಹತ್ವಾಕಾಂಕ್ಷೆಯ ಯೋಜನೆಯ ಕೆಲಸದಲ್ಲಿ ತೊಡಗಿದ್ದಾರೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ ಮುಖ್ಯಸ್ಥ ಕೆ. ಸಿವನ್ ಬುಧವಾರ ಹೇಳಿದ್ದಾರೆ.
ಚಂದ್ರಯಾನ- 3 ರ ಅಂದಾಜು ವೆಚ್ಚ ಸುಮಾರು ರೂಪಾಯಿ 250 ಕೋಟಿ ಆಗಲಿದೆ ಎಂದು ಅವರು ಹೇಳಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಸ್ರೋ ಮುಖ್ಯಸ್ಥರು, “ಚಂದ್ರಯಾನ -2 ನಲ್ಲಿ ಉತ್ತಮ ಪ್ರಗತಿ ಸಾಧಿಸಲಾಗಿದೆ ಮತ್ತು ಚಂದ್ರನ ಮೇಲ್ಮೈಯಲ್ಲಿ ಲ್ಯಾಂಡರ್ ಯಶಸ್ವಿಯಾಗಿ ಇಳಿಯಲು ವಿಫಲವಾದರೂ ಆರ್ಬಿಟರ್ ಇನ್ನೂ ಕಾರ್ಯನಿರ್ವಹಿಸುತ್ತಿದೆ. ಮುಂದಿನ 7 ವರ್ಷಗಳವರೆಗೆ ಆರ್ಬಿಟರ್ ಕಾರ್ಯನಿರ್ವಹಿಸುವುದನ್ನು ಮುಂದುವರಿಸುತ್ತದೆ ಮತ್ತು ದತ್ತಾಂಶವನ್ನು ಕಳುಹಿಸುತ್ತದೆ” ಎಂದು ಸಿವನ್ ಹೇಳಿದ್ದಾರೆ.
“ನಾವು ಚಂದ್ರಯಾನ -2 ನಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದ್ದೇವೆ, ನಮಗೆ ಯಶಸ್ವಿಯಾಗಿ ಇಳಿಯಲು ಸಾಧ್ಯವಾಗದಿದ್ದರೂ, ಆರ್ಬಿಟರ್ ಇನ್ನೂ ಕಾರ್ಯನಿರ್ವಹಿಸುತ್ತಿದೆ, ವಿಜ್ಞಾನ ದತ್ತಾಂಶವನ್ನು ತಯಾರಿಸಲು ಮುಂದಿನ 7 ವರ್ಷಗಳವರೆಗೆ ಅದು ಕಾರ್ಯನಿರ್ವಹಿಸಲಿದೆ” ಎಂದು ಸಿವನ್ ಹೇಳಿದ್ದಾರೆ.
ಲ್ಯಾಂಡರ್ ಇಳಿಯುವ ಸ್ಥಳವನ್ನು ಕಂಡುಹಿಡಿಯಲು ಪ್ರಯತ್ನಿಸಿದ ಭಾರತೀಯ ವ್ಯಕ್ತಿಯನ್ನು ಇಸ್ರೋ ಮುಖ್ಯಸ್ಥರು ಅಭಿನಂದಿಸಿದರು. ಕಾರ್ಯತಂತ್ರದ ಕಾರಣಗಳಿಂದಾಗಿ ಈ ಬೆಳವಣಿಗೆಯ ಬಗ್ಗೆ ಪ್ರತಿಕ್ರಿಯಿಸದಿರಲು ಆದ್ಯತೆ ನೀಡಿದ್ದೇನೆ ಎಂದಿದ್ದಾರೆ.
ಗಗನಯಾನ ಮಿಷನ್ ಬಗ್ಗೆ ಮಾತನಾಡಿದ ಅವರು, ಕಾರ್ಯಾಚರಣೆಗೆ ನಾಲ್ಕು 4 ಗಗನಯಾತ್ರಿಗಳನ್ನು ಆಯ್ಕೆ ಮಾಡಲಾಗಿದೆ ಮತ್ತು ಅವರ ತರಬೇತಿ ಜನವರಿ ಮೂರನೇ ವಾರದಲ್ಲಿ ಪ್ರಾರಂಭವಾಗಲಿದೆ ಎಂದಿದ್ದಾರೆ. ಅಲ್ಲದೇ, ಎಲ್ಲಾ ಆಯ್ದ 4 ಗಗನಯಾತ್ರಿಗಳು ಪುರುಷರು ಮತ್ತು ಅವರು ಭಾರತೀಯ ವಾಯುಸೇನೆಗೆ ಸೇರಿದವರು, ಅವರಿಗೆ ರಷ್ಯಾದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.