ಬೆಂಗಳೂರು : ಮಹಾರಾಷ್ಟ್ರದೊಂದಿಗಿನ ಗಡಿ ವಿವಾದ ಬಗೆಹರಿದ ವಿಷಯ ಎಂದಿರುವ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ಆ ರಾಜ್ಯಕ್ಕೆ ಒಂದೇ ಒಂದು ಇಂಚು ಭೂಮಿಯನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ಬೆಳಗಾವಿಯ ಒಂದೇ ಒಂದು ಇಂಚು ಮಹಾರಾಷ್ಟ್ರಕ್ಕೆ ಸಿಗುವುದಿಲ್ಲ. ಆ ನಗರ ಮತ್ತು ಜಿಲ್ಲೆಯ ಗಡಿ ಪ್ರದೇಶಗಳ ಮೇಲಿನ ನಮ್ಮ ಹಕ್ಕನ್ನು ಮಹಾಜನ್ ವರದಿಯು ಬಹಳ ಹಿಂದೆಯೇ ಸಮರ್ಥಿಸಿಕೊಂಡಿದೆ” ಎಂದು ಯಡಿಯೂರಪ್ಪ ಸುದ್ದಿಗಾರರಿಗೆ ತಿಳಿಸಿದರು.
ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕಳೆದ ವಾರ ಗಡಿ ವಿವಾದವನ್ನು ಪ್ರಸ್ತಾಪ ಮಾಡಿದ್ದರು. ಈ ಹಿನ್ನಲೆಯಲ್ಲಿ ಯಡಿಯೂರಪ್ಪ ಈ ಹೇಳಿಕೆಯನ್ನು ನೀಡಿದ್ದಾರೆ.
“1968 ರಲ್ಲಿ ಮಹಾಜನ್ ಆಯೋಗದ ವರದಿಯು ಬೆಳಗಾವಿ ಮತ್ತು ಗಡಿ ಜಿಲ್ಲೆಯ 800 ಹಳ್ಳಿಗಳ ಬಗ್ಗೆ ಕರ್ನಾಟಕದ ಹೇಳಿಕೆಯನ್ನು ಎತ್ತಿಹಿಡಿದಿದ್ದರಿಂದ, ಮಹಾರಾಷ್ಟ್ರವು ಗಡಿ ಸಮಸ್ಯೆಯನ್ನು ಮತ್ತೊಮ್ಮೆ ಹುಟ್ಟುಹಾಕುವುದು ಮತ್ತು ಗೊಂದಲವನ್ನು ಸೃಷ್ಟಿಸುವುದು ನ್ಯಾಯಸಮ್ಮತವಲ್ಲ” ಎಂದು ಯಡಿಯೂರಪ್ಪ ಪುನರುಚ್ಚರಿಸಿದರು.
ಮಹಾಜನ್ ವರದಿಯನ್ನು ಅಂತಿಮವೆಂದು ಅಂಗೀಕರಿಸಲಾಗಿರುವುದರಿಂದ, ಮಹಾರಾಷ್ಟ್ರವು ಈ ವಿಷಯವನ್ನು ಮತ್ತೊಮ್ಮೆ ಪ್ರಸ್ತಾಪಿಸುವುದನ್ನು ಮತ್ತು ಗಡಿ ಪ್ರದೇಶಗಳಲ್ಲಿ ಉದ್ವಿಗ್ನತೆಯನ್ನು ಉಂಟುಮಾಡುವುದನ್ನು ರಾಜ್ಯ ಸರ್ಕಾರ ಅನುಮತಿಸುವುದಿಲ್ಲ ಎಂದು ಅವರು ಹೇಳಿದ್ದಾರೆ.
“ನಾನು ಕರ್ನಾಟಕದ ಜನರಿಗೆ ಶಾಂತಿ ಕಾಪಾಡಿಕೊಳ್ಳಬೇಕೆಂದು ಮನವಿ ಮಾಡುತ್ತೇನೆ ಮತ್ತು ಬೆಳಗಾವಿ ಮತ್ತು ಜಿಲ್ಲೆಯ ಹಳ್ಳಿಗಳ ಮಾಲೀಕತ್ವದ ಬಗ್ಗೆ ಗಡಿಯುದ್ದಕ್ಕೂ ಕೇಳಿ ಬರುತ್ತಿರುವ ರಾಜಕೀಯ ಹೇಳಿಕೆಗಳಿಂದ ಪ್ರಚೋದನೆಗೆ ಒಳಗಾಗಬಾರದು” ಎಂದು ಯಡಿಯೂರಪ್ಪ ಹೇಳಿದ್ದಾರೆ.
ಬೆಂಗಳೂರಿನ ವಾಯುವ್ಯ ದಿಕ್ಕಿನಲ್ಲಿ ಸುಮಾರು 500 ಕಿ.ಮೀ ದೂರದಲ್ಲಿರುವ ಬೆಳಗಾವಿ ಬ್ರಿಟಿಷ್ ಆಳ್ವಿಕೆಯಲ್ಲಿ ಹಿಂದಿನ ಬಾಂಬೆ ಪ್ರೆಸಿಡೆನ್ಸಿಯ ಭಾಗವಾಗಿತ್ತು ಆದರೆ 1956 ರಲ್ಲಿ ಭಾಷಾ ಆಧಾರದ ಮೇಲೆ ರಾಜ್ಯಗಳ ಮರುಸಂಘಟನೆಯ ಸಮಯದಲ್ಲಿ ಮೈಸೂರು ರಾಜ್ಯಕ್ಕೆ ಇದನ್ನು ನೀಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.