ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯನ್ನು (ಸಿಎಎ) ವಿರೋಧಿಸುತ್ತಿರುವ ನಾಯಕರು “ನಾಲೆಡ್ಜ್ ಪ್ರೂಫ್ ಮತ್ತು ಇನ್ಫಾರ್ಮೇಶನ್ ಪ್ರೂಫ್ ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಸೋಮವಾರ ಹೇಳಿದ್ದಾರೆ.
“ನಮ್ಮ ಶಾಲಾ ದಿನಗಳಲ್ಲಿ, ವಾಟರ್ ಪ್ರೂಫ್ ವಾಚ್ (ಜಲನಿರೋಧಕ ಕೈಗಡಿಯಾರಗಳು) ಒಂದು ಫ್ಯಾಷನ್ ಆಗಿತ್ತು. ಇದು ಯಾವ ರೀತಿಯ ವಾಚ್ ಎಂದರೆ ಇದರೊಳಗೆ ನೀರು ಪ್ರವೇಶಿಸುತ್ತಿರಲಿಲ್ಲ. ಅದೇ ರೀತಿ, ಸಿಎಎಯನ್ನು ವಿರೋಧಿಸುವ ವಿರೋಧ ಪಕ್ಷದ ನಾಯಕರ ಬುದ್ಧಿ ಕೂಡ ನಾಲೆಡ್ಜ್ ಪ್ರೂಫ್ ಮತ್ತು ಇನ್ಫಾರ್ಮೇಶನ್ ಪ್ರೂಫ್ ” ಎಂದು ರಾಮ್ ಮಾಧವ್ ಹೇಳಿದ್ದಾರೆ.
“ಜ್ಞಾನ ಮತ್ತು ಮಾಹಿತಿಯು ಅವರ ತಲೆಯೊಳಗೆ ಪ್ರವೇಶಿಸುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಯಾರೊಬ್ಬರ ಪೌರತ್ವವನ್ನು ಕಸಿದುಕೊಳ್ಳುವುದಕ್ಕೂ ಸಿಎಎಗೂ ಯಾವುದೇ ಸಂಬಂಧವಿಲ್ಲ ಎಂಬುದು ಕಾನೂನು / ಕಾಯ್ದೆಯನ್ನು ತುಸು ಓದಿದ್ದರೂ ಅರ್ಥವಾಗುತ್ತಿತ್ತು ಎಂದು ಮಾಧವ್ ಹೇಳಿದ್ದಾರೆ.
ಕಾಯ್ದೆಯ ತುಸು ಓದುವಿಕೆ ಕೂಡ ಈ ಕಾಯ್ದೆಯು ಪೌರತ್ವವನ್ನು ಕಸಿದುಕೊಳ್ಳುವ ಬಗ್ಗೆ ಅಲ್ಲ ಎಂದು ಅವರಿಗೆ ಅರ್ಥವಾಗುವಂತೆ ಮಾಡುತ್ತದೆ ಎಂದಿದ್ದಾರೆ.
“ಸಿಎಎ ಸುತ್ತಲಿನ ವಿವಾದವು ಅಜ್ಞಾನದಿಂದ ಅಥವಾ ಉದ್ದೇಶಪೂರ್ವಕವಾಗಿ ಸತ್ಯವನ್ನು ವಿರೂಪಗೊಳಿಸಿರುವುದರ ಪರಿಣಾಮವಾಗಿದೆ” ಎಂದು ಅವರು ಹೇಳಿದ್ದಾರೆ.
ಹೊಸ ಕಾನೂನು 2014 ರ ಡಿಸೆಂಬರ್ 31 ರಂದು ಅಥವಾ ಅದಕ್ಕೂ ಮೊದಲು ಭಾರತಕ್ಕೆ ಬಂದ ಪಾಕಿಸ್ಥಾನ, ಅಫ್ಘಾನಿಸ್ಥಾನ ಮತ್ತು ಬಾಂಗ್ಲಾದೇಶದ ಹಿಂದೂಗಳು, ಸಿಖ್ಖರು, ಜೈನರು, ಪಾರ್ಸಿಗಳು, ಬೌದ್ಧರು ಮತ್ತು ಕ್ರಿಶ್ಚಿಯನ್ನರಿಗೆ ಪೌರತ್ವವನ್ನು ನೀಡುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.