News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಷ್ಯಾದಲ್ಲಿ ವರ್ಲ್ಡ್ ರ್‍ಯಾಪಿಡ್ ಚೆಸ್ ಪ್ರಶಸ್ತಿಯನ್ನು ಗೆದ್ದ ಕೊನೆರು ಹಂಪಿ

ಮಾಸ್ಕೋ : ರಷ್ಯಾದ ಮಾಸ್ಕೋದಲ್ಲಿ ಭಾನುವಾರ ನಡೆದ ಮಹಿಳಾ ವರ್ಲ್ಡ್ ರ್‍ಯಾಪಿಡ್ ಚೆಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಕೊನೆರು ಹಂಪಿ ಜಯಗಳಿಸಿದ್ದಾರೆ. ಚೀನಾದ ಲೀ ಟಿಂಗ್ಜಿಯವರನ್ನು ಸೋಲಿಸಿ ಈ ಸಾಧನೆಯನ್ನು ಮಾಡಿದ್ದಾರೆ.

12 ಸುತ್ತುಗಳ ಆಟದ ನಂತರ, ಹಂಪಿ ಅವರು ಒಂಬತ್ತು ಪಾಯಿಂಟ್‌ಗಳನ್ನು ಗಳಿಸಿದ್ದರು. ಇದು ಅವರನ್ನು ಟಿಂಗ್ಜಿಯೊಂದಿಗೆ ಟೈ ಆಗುವಂತೆ ಮಾಡಿತ್ತು. ನಂತರ ಇಬ್ಬರೂ ಡೆಡ್ಲಾಕ್ ಅನ್ನು ಮುರಿಯಲು ಆರ್ಮಗೆಡ್ಡೋನ್ ಆಟವನ್ನು ಆಡಿದರು.

ಇದಕ್ಕೂ ಮೊದಲು, ಆರಂಭಿಕ ಆಟದಲ್ಲಿ ಕೊನೆರು ಹಂಪಿ ಸೋಲು ಕಂಡಿದ್ದರು. ಎರಡನೇ ಪಂದ್ಯದಲ್ಲಿ ಶೀಘ್ರವಾಗಿ ಚೇತರಿಸಿಕೊಂಡು ಮುನ್ನಡೆದರು.

ಹಂಪಿಯವರು ವರ್ಲ್ಡ್ ವುವೆನ್ಸ್ ರ್‍ಯಾಪಿಡ್ ಚಾಂಪಿಯನ್ ಎಂಬ ಕಿರೀಟವನ್ನು ಮುಡಿಗೇರಿಸಿಕೊಂಡರೆ, ನಾರ್ವೆಯ ಮ್ಯಾಗ್ನಸ್ ಕಾರ್ಲ್ಸೆನ್ ಶನಿವಾರ ಅದೇ ಸ್ಥಳದಲ್ಲಿ ಪುರುಷರ ಚಾಂಪಿಯನ್ಶಿಪ್ ಪಡೆದುಕೊಂಡರು.

ತನ್ನ ಯಶಸ್ಸಿಗೆ ಸಂತಸವನ್ನು ವ್ಯಕ್ತಪಡಿಸಿ ಮಾತನಾಡಿರುವ ಕೊನೆರು ಹಂಪಿ “ನಾನು 3 ನೇ ದಿನದಂದು ನನ್ನ ಮೊದಲ ಪಂದ್ಯವನ್ನು ಪ್ರಾರಂಭಿಸಿದಾಗ, ನಾನು ಅಗ್ರಸ್ಥಾನದಲ್ಲಿರುತ್ತೇನೆ ಎಂದು ಊಹಿಸಿರಲಿಲ್ಲ. ಮೊದಲ ಮೂರು ಸ್ಥಾನಗಳನ್ನು ತಲುಪಬೇಕೆಂಬುದು ನನ್ನ ಆಶಯವಾಗಿತ್ತು. ಟೈ-ಬ್ರೇಕ್ ಆಟಗಳನ್ನು ಆಡಬೇಕಾಗುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ”

“ನಾನು ಮೊದಲ ಪಂದ್ಯವನ್ನು ಸಮಯದಲ್ಲಿ ಕಳೆದುಕೊಂಡೆ ಆದರೆ ಎರಡನೇ ಪಂದ್ಯದಲ್ಲಿ ಮತ್ತೆ ಹಳಿಗೆ ಮರಳಿದೆ. ಇದು ಜೂಜಿನ ಆಟ, ಆದರೆ ನಾನು ಗೆದ್ದೆ. ಅಂತಿಮ ಪಂದ್ಯದಲ್ಲಿ, ನಾನು ಉತ್ತಮ ಸ್ಥಾನವನ್ನು ಹೊಂದಿದ್ದೇನೆ ಮತ್ತು ಇದು ಆರಾಮದಾಯಕ ಗೆಲುವಾಗಿತ್ತು, ”ಎಂದು ಅವರು ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top