ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ಮಹತ್ವಾಕಾಂಕ್ಷೆಯ ನಾಗರಿಕ ಕೇಂದ್ರಿತ ಆನ್ಲೈನ್ ವೇದಿಕೆ ಮೈಗೌ ಇಂಡಿಯಾ 100 ಕೋಟಿಗೂ ಅಧಿಕ ನೋಂದಣಿಗಳನ್ನು ಕಾಣುವ ಮೂಲಕ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಪ್ರಧಾನಿ ನರೇಂದ್ರ ಮೋದಿ ಕಾರ್ಯಾಲಯ ಈ ಸಾಧನೆಯನ್ನು ಕೊಂಡಾಡಿದೆ. ಚಿಂತನೆಗಳ ಮತ್ತು ಒಳನೋಟಗಳ ಹರಿವಿಕೆಗೆ ಇದೊಂದು ಮಹತ್ವದ ವೇದಿಕೆಯಾಗಿದೆ.
2014ರಲ್ಲಿ ಮೊದಲ ಬಾರಿಗೆ ಪ್ರಧಾನಿಯಾಗಿ ಅಧಿಕಾರಕ್ಕೇರಿದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ಈ ವೇದಿಕೆಯನ್ನು ಆರಂಭಿಸಿದ್ದರು. ಈ ವೇದಿಕೆಯನ್ನು ಬಳಸಿಕೊಂಡು ನಾಗರಿಕರು ಸರಕಾರಕ್ಕೆ ಸಲಹೆ ಸೂಚನೆಗಳನ್ನು ನೀಡಬಹುದಾಗಿದೆ ಮತ್ತು ಆಡಳಿತದ ಬಗ್ಗೆ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದಾಗಿದೆ.
ಮೈಗೌವ್ ಆನ್ಲೈನ್ ವೇದಿಕೆಯು ಟ್ವೀಟ್ ಮೂಲಕ ಈ ಸಾಧನೆಯನ್ನು ಘೋಷಿಸಿದ್ದು, “ನಾವು ಹೊಸವರ್ಷ ಮತ್ತು ಹೊಸ ದಶಕವನ್ನು ಸ್ವಾಗತಿಸುತ್ತಿರುವಂತೆ ಈ ವೇದಿಕೆ ಅತಿದೊಡ್ಡ, ಅತಿ ಕ್ರಿಯಾಶೀಲ ಮತ್ತು ಉತ್ತಮವಾಗಿ ಹೊರಹೊಮ್ಮಿದೆ. ಪ್ರೇರಣೆ ಮತ್ತು ಮಾರ್ಗದರ್ಶನಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದಗಳು” ಎಂದಿದೆ.
Five years ago, @mygovindia began its journey with a vision to offer a platform for the voice and views of the people of India.
It has emerged as a vibrant centre for ideas and insights.
Congrats on this milestone! https://t.co/8PiZI0IMZ5
— PMO India (@PMOIndia) December 28, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.