ಲಕ್ನೋ: ಉತ್ತರಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರವು ತ್ರಿವಳಿ ತಲಾಕ್ ಸಂತ್ರಸ್ತರಿಗೆ ವಾರ್ಷಿಕ ರೂ. 6000 ಪಿಂಚಣಿಯನ್ನು ನೀಡಲು ನಿರ್ಧರಿಸಿದೆ.
ಪತಿಯಿಂದ ತ್ರಿವಳಿ ತಲಾಕ್ಗೆ ಒಳಗಾಗಿ ನೋವನ್ನು ಅನುಭವಿಸುತ್ತಿರುವ ಮಹಿಳೆಯರಿಗೆ ಸಾಂತ್ವನವನ್ನು ನೀಡಲು ಮತ್ತು ಅವರ ಜೀವನಕ್ಕೆ ಭದ್ರತೆಯನ್ನು ಕಲ್ಪಿಸುವ ಸಲುವಾಗಿ ಈ ಮಹತ್ವದ ನಿರ್ಧಾರವನ್ನು ಉತ್ತರಪ್ರದೇಶ ಸರ್ಕಾರ ಕೈಗೊಂಡಿದೆ.
ಶಿಯಾ ಧಾರ್ಮಿಕ ಮುಖಂಡ ಮೌಲಾನಾ ಸೈಫ್ ಅಬ್ಬಾಸ್ ಈ ನಿರ್ಧಾರವನ್ನು ಸ್ವಾಗತಿಸಿದ್ದಾರೆ. ಅಲ್ಲವೇ, ಸರ್ಕಾರ ಮುಸ್ಲಿಂ ಮಕ್ಕಳ ಶಿಕ್ಷಣಕ್ಕೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರವು ದೇಶದಲ್ಲಿ ತ್ರಿವಳಿ ತಲಾಕ್ ಪದ್ಧತಿಯನ್ನು ನಿಷೇಧಿಸಿದೆ. ತ್ರಿವಳಿ ತಲಾಕ್ ನೀಡುವವರಿಗೆ ಕಠಿಣಾತಿ ಕಠಿಣ ಶಿಕ್ಷೆಯನ್ನು ಕಾನೂನಿನಡಿ ನೀಡಲಾಗುತ್ತದೆ.
ಇದೀಗ ಯೋಗಿ ಆದಿತ್ಯನಾಥ ಸರ್ಕಾರವು ಒಂದು ಹೆಜ್ಜೆ ಮುಂದಿಟ್ಟು ತ್ರಿವಳಿ ತಲಾಕ್ ಅನಿಷ್ಠ ಪದ್ಧತಿಗೆ ಒಳಗಾಗಿ ದುಸ್ತರವಾದ ಜೀವನವನ್ನು ನಡೆಸುತ್ತಿರುವ ಮಹಿಳೆಯರಿಗೆ ವಾರ್ಷಿಕ ಪಿಂಚಣಿಯನ್ನು ನೀಡಲು ನಿರ್ಧರಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.