ನವದೆಹಲಿ: ಪ್ರಧಾನ್ ಮಂತ್ರಿ ಆವಾಸ್ ಯೋಜನೆ-ನಗರ (ಪಿಎಂಎವೈ-ಯು) ಅಡಿಯಲ್ಲಿ ಒಂದು ಕೋಟಿ ಮನೆಗಳನ್ನು ಮಂಜೂರು ಮಾಡಿದ್ದಾಗಿ ಡಿ.27ರಂದು ನಗರ ವ್ಯವಹಾರಗಳ ಸಚಿವಾಲಯ ಮಾಡಿದ ಘೋಷಣೆಯನ್ನು ಮಹತ್ವದ ಸಾಧನೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಬಣ್ಣಿಸಿದ್ದಾರೆ.
ಪಿಎಂಎವೈ-ಅರ್ಬನ್ನ ವಿವಿಧ ಆಯಾಮಗಳ ಅಡಿಯಲ್ಲಿ ತಮ್ಮ ಸಚಿವಾಲಯವು ಒಂದು ಕೋಟಿ ಮನೆಗಳನ್ನು ಮಂಜೂರು ಮಾಡಿದೆ ಎಂದು ನಗರ ವ್ಯವಹಾರಗಳ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಶುಕ್ರವಾರ ಮಾಡಿದ ಟ್ವೀಟ್ಗೆ ಪ್ರತಿಕ್ರಿಯಿಸಿದ ಮೋದಿ, ಇದು ನಗರ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಒಂದು ಮಹತ್ವದ ಸಾಧನೆ ಎಂದು ಹೇಳಿದರು.
“ಈ ಉಪಕ್ರಮವು ಪಾರದರ್ಶಕತೆ, ತಂತ್ರಜ್ಞಾನದ ಬಳಕೆ ಮತ್ತು ಶೀಘ್ರ ಅನುಷ್ಠಾನದಿಂದ ಗುರುತಿಸಲ್ಪಟ್ಟಿದೆ. ಪ್ರತಿಯೊಬ್ಬ ಭಾರತೀಯನೂ ತಮ್ಮ ತಲೆಯ ಮೇಲೆ ಸೂರು ಹೊಂದಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಲು ಶ್ರಮವಹಿಸಿದ್ದಕ್ಕಾಗಿ ನಗರ ವ್ಯವಹಾರಗಳ ಸಚಿವಾಲಯದ ಇಡೀ ತಂಡವನ್ನು ನಾನು ಅಭಿನಂದಿಸುತ್ತೇನೆ” ಎಂದು ಮೋದಿ ಟ್ವಿಟರ್ನಲ್ಲಿ ಬರೆದಿದ್ದಾರೆ.
ಪುರಿ ಅವರು “50 ನೇ ಸಿಎಸ್ಎಂಸಿ ಸಭೆಯ ಬಳಿಕ ಪಿಎಂಎವೈ-ಅರ್ಬನ್ನ ವಿವಿಧ ಆಯಾಮಗಳ ಅಡಿಯಲ್ಲಿ ಒಂದಕ್ಕಿಂತ ಹೆಚ್ಚು ಕೋಟಿ ಮನೆಗಳನ್ನು ಮಂಜೂರು ಮಾಡಿದ್ದೇವೆ ಎಂದು ಘೋಷಿಸಲು ಸಂತೋಷವಾಗುತ್ತಿದೆ, 2022ರೊಳಗೆ ಎಲ್ಲರಿಗೂ ಸೂರು ಒದಗಿಸುವಂತೆ ಮಾಡುವುದು ಪಿಎಂ ಮೋದಿಯವರ ದೂರದೃಷ್ಟಿಯ ಯೋಜನೆ” ಎಂದು ಟ್ವಿಟ್ ಮಾಡಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.