ನವದೆಹಲಿ: ಕಾಂಗ್ರೆಸ್ ಮುಖಂಡ ಡಿ. ಕೆ. ಶಿವಕುಮಾರ್ ಅವರು ಕಪಾಲಿ ಬೆಟ್ಟದಲ್ಲಿ 114 ಅಡಿ ಎತ್ತರದ ಏಸುವಿನ ಪ್ರತಿಮೆಯನ್ನು ನಡೆಸಲು ನಿರ್ಧರಿಸಿದ್ದಾರೆ. ಇದು ರಾಜ್ಯಾದ್ಯಂತ ಭಾರೀ ದೊಡ್ಡ ವಿವಾದವನ್ನೇ ಸೃಷ್ಟಿ ಮಾಡಿದೆ. ಈ ಬಗ್ಗೆ ಸ್ಥಳಿಯಾಡಳಿತಗಳಿಂದ ರಾಜ್ಯ ಸರ್ಕಾರ ವರದಿಯನ್ನು ಪಡೆದುಕೊಳ್ಳುತ್ತಿದೆ. ಏಸು ಪ್ರತಿಮೆಗೆ ಸರ್ಕಾರಿ ಭೂಮಿಯನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ.
ವರದಿಗಳ ಪ್ರಕಾರ, ಮಾಜಿ ಸಿಎಂ ಎಚ್. ಡಿ. ಕುಮಾರಸ್ವಾಮಿಯವರು ಮಂಜೂರು ಮಾಡಿದ ಭೂಮಿಯ ಬಗ್ಗೆ ರಾಜ್ಯ ಸರ್ಕಾರ ಅವಲೋಕನ ಮಾಡುತ್ತಿದೆ. ಕಂದಾಯ ಸಚಿವ ಆರ್. ಅಶೋಕ್ ಅವರ ಪ್ರಕಾರ, ಗೋಮಾಳಕ್ಕಾಗಿ ಈ ಭೂಮಿಯನ್ನು ನೀಡಲಾಗಿತ್ತು. ಆದರೆ ಡಿಕೆಶಿ ಅವರು ಇದನ್ನು ಬರಡು ಭೂಮಿ ಎಂದು ಸುಳ್ಳು ಹೇಳುತ್ತಿದ್ದಾರೆ. “ಭೂ ಹಂಚಿಕೆ ಕುರಿತು ವರದಿ ಸಲ್ಲಿಸುವಂತೆ ರಾಮನಗರ ಜಿಲ್ಲೆಯ ಜಿಲ್ಲಾಧಿಕಾರಿಗೆ ಸೂಚಿಸಿದ್ದೇನೆ” ಎಂದು ಅವರು ಹೇಳಿದ್ದಾರೆ.
ಪ್ರತಿಮೆಯನ್ನು ನಿರ್ಮಿಸುತ್ತಿರುವ ಟ್ರಸ್ಟ್ಗಾಗಿ ಕಪಾಲಿಬೆಟ್ಟದಲ್ಲಿ 10 ಎಕರೆ ಭೂಮಿಯನ್ನು ಸರ್ಕಾರದಿಂದ ಖರೀದಿಸಲು ಕಾಂಗ್ರೆಸ್ ನಾಯಕ ತನ್ನ ಸ್ವಂತ ಹಣವನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಡಿಕೆಶಿ ಕಚೇರಿ ಈ ಹಿಂದೆ ಹೇಳಿತ್ತು, ಇದು ವಿಶ್ವದ ಅತಿ ಎತ್ತರದ ಏಸುವಿನ ಏಕಶಿಲೆಯ ಪ್ರತಿಮೆಯಾಗಲಿದೆ ಎಂದು ಅದು ಹೇಳಿಕೊಂಡಿದೆ . ಡಿಸೆಂಬರ್ 25 ರಂದು ಶಿವಕುಮಾರ್ ಅವರು ಪ್ರಾರ್ಥನಾ ಸಭೆಯಲ್ಲಿ ಇದಕ್ಕೆ ಅಡಿಪಾಯ ಹಾಕಿದ್ದಾರೆ ಮತ್ತು ಯೋಜನೆಗಾಗಿ ಶೀರ್ಷಿಕೆ ಪತ್ರವನ್ನು ಹಸ್ತಾಂತರಿಸಿದ್ದಾರೆ.
ಆದರೆ, ಜಮೀನಿನ ಮಾಲೀಕತ್ವದ ಕುರಿತು ಮಾತನಾಡಿದ ಹಿರಿಯ ಸಚಿವ ಆರ್.ಅಶೋಕ್, “ಈ ಭೂಮಿ ಶಿವಕುಮಾರ್ ಅವರ ಆಸ್ತಿಯಲ್ಲ, ಸರ್ಕಾರಿ ಗೋಮಳಾ ಜಮೀನು. ಶಿವಕುಮಾರ್ ಅವರು ಯಾವ ಅರ್ಥದಲ್ಲಿ ಇದನ್ನು ಖರೀದಿಸಿದ್ದಾರೆ ಮತ್ತು ದಾನ ಕೊಟ್ಟಿದ್ದಾರೆಂದು ನನಗೆ ತಿಳಿದಿಲ್ಲ. ಈ ಭೂಮಿಯನ್ನು ಯಾರಿಗೂ ದಾನ ಮಾಡಲು ಸಾಧ್ಯವಿಲ್ಲ” ಎಂದು ಅವರು ಹೇಳಿದ್ದಾರೆ.
ಕಪಾಲಿಬೆಟ್ಟವನ್ನು ಇನ್ನು ಮುಂದೆ “ಏಸು ಬೆಟ್ಟ” ಎಂದು ಕರೆಯಲಾಗುತ್ತದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ವದಂತಿಗಳು ಇನ್ನಷ್ಟು ಭಯವನ್ನು ಸೃಷ್ಟಿಸಿದೆ. “ಸಾವಿರಾರು ವರ್ಷಗಳಿಂದ ಇದನ್ನು ಕಪಾಲಿಬೆಟ್ಟ ಎಂದು ಕರೆಯಲಾಗುತ್ತಿದೆ, ಯಾವುದೇ ಕಾರಣಕ್ಕೂ ಅದರ ಹೆಸರನ್ನು ಬದಲಾಯಿಸಲು ನಾವು ಅನುಮತಿಸುವುದಿಲ್ಲ” ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.