ಜೋಧ್ಪುರ: ಪೌರತ್ವ ತಿದ್ದುಪಡಿ ಕಾಯ್ದೆ ಅನುಷ್ಠಾನಗೊಂಡಿರುವುದಕ್ಕೆ ರಾಜಸ್ಥಾನದಲ್ಲಿ ವಾಸಿಸುತ್ತಿರುವ ಪಾಕಿಸ್ಥಾನ ಹಿಂದೂ ನಿರಾಶ್ರಿತರು ಸಂತೋಷವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದವನ್ನು ಅರ್ಪಿಸಿದ್ದಾರೆ.
“ಸಿಎಎ ಅಂಗೀಕಾರದ ಬಗ್ಗೆ ನಮಗೆ ಸಂತೋಷವಾಗಿದೆ. ಇಲ್ಲಿಗೆ ವಲಸೆ ಬಂದವರಲ್ಲಿ ಶೇ.70-80ರಷ್ಟು ಜನರು ಎಸ್ಸಿ / ಎಸ್ಟಿಗಳು” ಎಂದು ಅವರಲ್ಲಿ ಒಬ್ಬರು ಹೇಳಿದ್ದಾರೆ.
“ನಮ್ಮಲ್ಲಿ ಸುಮಾರು 15-20 ಜನರು ಭಾರತದಲ್ಲಿ ಜನಿಸಿದವರು, ಇಲ್ಲಿಯೇ ಮದುವೆಯಾದವರು ಆದರೆ ಪಾಕಿಸ್ಥಾನಕ್ಕೆ ಕೇವಲ ಸಂಪಾದಿಸಲು ತೆರಳಿದ್ದರು. ನಂತರ ಗಡಿಗಳು ಬಂದವು. ನಾವು ಹಿಂತಿರುಗಿದೆವು. ಹಿಂದಿರುಗಿ ಬಂದವರಲ್ಲಿ ಹೆಚ್ಚಿನವರು ಭಿಲ್ಸ್” ಅವರು ಹೇಳಿದ್ದಾರೆ.
“ನಾವು ಸಾಯುತ್ತೇವೆ ಆದರೆ ಹಿಂದಿರುಗುವುದಿಲ್ಲ. ನಾವು ಬಡವರು. ನಮಗೆ ಸಹಾಯ ಬೇಕು. ನಮಗೆ ಮೋದಿ ಅವರು ಪೌರತ್ವ ಒದಗಿಸಲು ನಿರ್ಧರಿಸುವ ಮೂಲಕ ಒಳ್ಳೆಯದನ್ನು ಮಾಡಿದ್ದಾರೆ ” ಎಂದು ಮಹಿಳೆಯೊಬ್ಬರು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ ಅರ್ಪಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.