ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಬಗ್ಗೆ ರಾಷ್ಟ್ರವ್ಯಾಪಿಯಾಗಿ ಪ್ರತಿಭಟನೆಗಳು ನಡೆಯುತ್ತಿವೆ. ಆದರೆ ಎಷ್ಟು ಮಂದಿ ಕಾಯ್ದೆಯನ್ನು ವಿರೋಧಿಸುತ್ತಾರೋ ಅದಕ್ಕಿಂತಲೂ ಹೆಚ್ಚು ಮಂದಿ ಕಾಯ್ದೆಯ ಪರವಾಗಿ ನಿಂತಿದ್ದಾರೆ. ನಗರ ನಕ್ಸಲರು, ನಕಲಿ ಬುದ್ಧಿಜೀವಿಗಳು ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ ಎಂಬ ಮಾತುಗಳು ದೊಡ್ಡ ಮಟ್ಟದಲ್ಲಿ ಕೇಳಿ ಬರುತ್ತಿದೆ.
ಸುಮಾರು 1100ಕ್ಕೂ ಅಧಿಕ ಶಿಕ್ಷಣ ತಜ್ಞರು, ಬುದ್ಧಿವಂತರು ಮತ್ತು ಸಂಶೋಧನಾ ಪಂಡಿತರು ಇತ್ತೀಚಿಗೆ ಅನುಷ್ಠಾನಕ್ಕೆ ಬಂದ ಪೌರತ್ವ ತಿದ್ದುಪಡಿ ಕಾಯ್ದೆಯ ಪರವಾಗಿ ನಿಂತಿದ್ದಾರೆ. ದೇಶಕ್ಕೆ ಇದು ಅತ್ಯಗತ್ಯ, ದೇಶದ ಹಿತಾಸಕ್ತಿಗೆ ಅನುಗುಣವಾಗಿಯೇ ಕಾಯ್ದೆ ಇದೆ ಎಂದು ಪ್ರತಿಪಾದಿಸಿದ್ದಾರೆ.
ಭಾರತೀಯ ಮತ್ತು ವಿದೇಶಗಳಲ್ಲಿನ ಹಲವು ಕಾಲೇಜುಗಳ ಮತ್ತು ವಿಶ್ವವಿದ್ಯಾಲಯಗಳ ಪ್ರಾಧ್ಯಾಪಕರು, ಸಹಾಯಕ ಪ್ರಾಧ್ಯಾಪಕರು, ದೇಶ ಮತ್ತು ವಿದೇಶಗಳ ಸಂಶೋಧನಾ ವಿದ್ವಾಂಸರು, ಏಮ್ಸ್, ಐಐಟಿಗಳು ಮತ್ತು ಐಐಎಂಗಳಂತಹ ಸಂಸ್ಥೆಗಳಿಗೆ ಸಂಬಂಧಿಸಿದ ವಿಜ್ಞಾನಿಗಳು ಮತ್ತು ವಿದ್ವಾಂಸರು, ಕಾನೂನು ವಿದ್ಯಾರ್ಥಿಗಳು ಮತ್ತು ವೈದ್ಯರು ಪೌರತ್ವ ತಿದ್ದುಪಡಿ ಕಾಯ್ದೆಯ ಪರ ನಿಂತಿದ್ದಾರೆ.
ವಿಜ್ಞಾನಿ ಡಾ. ಆನಂದ್ ರಂಗನಾಥನ್, ಹಿರಿಯ ಪತ್ರಕರ್ತೆ ಕಾಂಚನ್ ಗುಪ್ತಾ, ಅಭಿಜಿತ್ ಅಯ್ಯರ್ಜೆ, ಸುಪ್ರೀಂ ಕೋರ್ಟ್ ವಕೀಲ ಜೆ. ಸಾಯಿ ದೀಪಕ್, ಮುಂತಾದ ಹೆಸರಾಂತ ಶಿಕ್ಷಣ ತಜ್ಞರು ಪೌರತ್ವದ ಪರವಾಗಿ ಸಹಿ ಹಾಕಿದ್ದಾರೆ. ” ನಾವು ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ) 2019 ಗೆ ಬೆಂಬಲವಾಗಿ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು ಮತ್ತು ಸಂಶೋಧನಾ ವಿದ್ವಾಂಸರು ತಮ್ಮ ವೈಯಕ್ತಿಕ ಸಾಮರ್ಥ್ಯದಲ್ಲಿ ಈ ಹೇಳಿಕೆಯನ್ನು ನೀಡುತ್ತಿದ್ದಾರೆ” ಎಂದು ತಿಳಿಸಿದ್ದಾರೆ.
“ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದಲ್ಲಿ ಕಿರುಕುಳಕ್ಕೊಳಗಾದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಆಶ್ರಯ ಮತ್ತು ಪೌರತ್ವವನ್ನು ಒದಗಿಸುವ ದೀರ್ಘಕಾಲದ ಬೇಡಿಕೆಯನ್ನು ಈ ಕಾಯ್ದೆಯು ಪೂರೈಸುತ್ತದೆ. 1950 ರ ಲಿಯಾಖತ್-ನೆಹರು ಒಪ್ಪಂದದ ವೈಫಲ್ಯದ ನಂತರ, ವಿವಿಧ ನಾಯಕರು ಮತ್ತು ಕಾಂಗ್ರೆಸ್, ಸಿಪಿಐ (ಎಂ) ಇತ್ಯಾದಿ ಪಕ್ಷಗಳ ನಾಯಕರು, ದಲಿತ ನಾಯಕರು ಪಾಕಿಸ್ಥಾ ಮತ್ತು ಬಾಂಗ್ಲಾದೇಶದ ಧಾರ್ಮಿಕ ಅಲ್ಪಸಂಖ್ಯಾತರಿಗೆ ಆಶ್ರಯ ಮತ್ತು ಪೌರತ್ವವನ್ನು ನೀಡುವಂತೆ ಒತ್ತಾಯಿಸಿದ್ದಾರೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.