ಲಕ್ನೋ: ಭಾರತದ ಪೌರತ್ವವನ್ನು ಬಯಸುವ ನಿರಾಶ್ರಿತರಿಗಾಗಿ ಗುರುವಾರ ಉತ್ತರಪ್ರದೇಶ ಬಿಜೆಪಿ ನೋಂದಣಿ ಅಭಿಯಾನವನ್ನು ಪ್ರಾರಂಭಿಸಲಿದೆ. ಇದೇ ದಿನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬಗ್ಗೆ ಹರಡಿರುವ ತಪ್ಪು ಮಾಹಿತಿಯನ್ನು ದೂರ ಮಾಡಲು ಪಕ್ಷವು ಒಂದು ತಿಂಗಳ ಅಭಿಯಾನವನ್ನು ಕೂಡ ಪ್ರಾರಂಭಿಸಲಿದೆ.
ಪ್ರತಿಪಕ್ಷಗಳು ಪೌರತ್ವ ಕಾನೂನಿನ ಬಗ್ಗೆ ವದಂತಿಗಳನ್ನು ಹರಡಿವೆ ಮತ್ತು ಈ ವದಂತಿಗಳು ರಾಜ್ಯದಲ್ಲಿ ಇತ್ತೀಚೆಗೆ ಹಿಂಸಾಚಾರ ಭುಗಿಲೇಳುವಂತೆ ಮಾಡಿವೆ ಎಂದು ಯುಪಿ ಬಿಜೆಪಿ ರಾಜ್ಯಾಧ್ಯಕ್ಷ ಸ್ವತಂತ್ರ ದೇವ್ ಹೇಳಿದ್ದಾರೆ.
“ಸಿಎಎಯ ಸತ್ಯ ಸಂಗತಿಗಳನ್ನು ಜನರಿಗೆ ತಿಳಿಸಲು ರಾಜ್ಯದಾದ್ಯಂತ ಡಿಸೆಂಬರ್ 26 ರಿಂದ ಜನವರಿ 25 ರವರೆಗೆ ನಮ್ಮ ಪಕ್ಷ ಅಭಿಯಾನವನ್ನು ನಡೆಸಲಿದೆ. ಪಕ್ಷದ ಕಾರ್ಯಕರ್ತರು ಗ್ರಾಮೀಣ ಭಾಗದ ಜನರನ್ನು ತಲುಪಲಿದ್ದಾರೆ ಮತ್ತು ಯಾವುದೇ ಅನುಮಾನವಿದ್ದರೂ ಅದಕ್ಕೆ ಸ್ಪಷ್ಟನೆ ನೀಡುತ್ತಾರೆ” ಎಂದಿದ್ದಾರೆ.
ಸಿಎಎ ಮುಖ್ಯವಾಗಿ ಪಾಕಿಸ್ಥಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ಥಾನದಲ್ಲಿ ಕಿರುಕುಳಕ್ಕೊಳಗಾದ ಅಲ್ಪಸಂಖ್ಯಾತರಿಗೆ ಇದೆ ಎಂದು ಸಿಂಗ್ ಹೇಳಿದರು. “ನಾವು ಭಾರತೀಯ ಪೌರತ್ವಕ್ಕಾಗಿ ಕಾಯುತ್ತಿರುವ ನಿರಾಶ್ರಿತರನ್ನು ಸಹ ನೋಂದಾಯಿಸುತ್ತೇವೆ. ನಮ್ಮ ಪಕ್ಷವು ಮುಸ್ಲಿಮರನ್ನು ಸಹ ತಲುಪುತ್ತದೆ ಮತ್ತು ಅವರ ಮೇಲೆ ಸಿಎಎ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ” ಎಂಬ ಭರವಸೆಯನ್ನು ಅವರು ನೀಡಿದ್ದಾರೆ.
ನೆರೆಯ ದೇಶಗಳ ನಿರಾಶ್ರಿತರನ್ನು ಗುರುತಿಸಲು ಮತ್ತು ಅವರನ್ನು ಸಂಪರ್ಕಿಸಲು ಮತ್ತು ಅವರಿಗೆ ಪೌರತ್ವ ತಿದ್ದುಪಡಿ ಕಾಯ್ದೆಯಡಿ ಪೌರತ್ವ ಪಡೆಯಲು ಸಹಾಯ ಮಾಡುವಂತೆ ಬಿಜೆಪಿ ಈಗಾಗಲೇ ತನ್ನ ಸಂಸದರಿಗೆ ಸೂಚನೆಯನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.