ನವದೆಹಲಿ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ರಾಷ್ಟ್ರವ್ಯಾಪಿ ನಡೆಯುತ್ತಿರುವ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸಿ-ವೋಟರ್ ಮತ್ತು ಎಬಿಪಿ ನ್ಯೂಸ್ ಸಮೀಕ್ಷೆಯನ್ನು ನಡೆಸಿದೆ. ಈ ಮೂಲಕ ದೇಶದಲ್ಲಿ ಹೊಸದಾಗಿ ಪರಿಚಯಿಸಲಾದ ಕಾನೂನು ದೇಶದ ಸುಧಾರಣೆಗಾಗಿಯೇ ಅಥವಾ ಅಲ್ಲವೇ ಎಂಬುದನ್ನು ಕಂಡುಹಿಡಿಯುವ ಪ್ರಯತ್ನವನ್ನು ಮಾಡಿದೆ.
ಡಿಸೆಂಬರ್ 17 ರಿಂದ 19 ರವರೆಗೆ ದೇಶಾದ್ಯಂತ 3,000 ಕ್ಕೂ ಹೆಚ್ಚು ನಾಗರಿಕರನ್ನು ಈ ಸಮೀಕ್ಷೆ ಒಳಪಡಿಸಲಾಗಿದೆ. ಇದೇ ವೇಳೆ ಅಸ್ಸಾಂ, ಈಶಾನ್ಯ ಮತ್ತು ಮುಸ್ಲಿಂ ಸಮುದಾಯದ ತಲಾ 500 ಕ್ಕೂ ಹೆಚ್ಚು ಜನರಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ.
ಕೇಂದ್ರ ಸರ್ಕಾರ ಪರಿಚಯಿಸಿದ ಪೌರತ್ವ ತಿದ್ದುಪಡಿ ಕಾಯ್ದೆ ಮುಸ್ಲಿಂ ಸಮುದಾಯಕ್ಕೆ ವಿರುದ್ಧವಲ್ಲ ಎಂದು ಹೆಚ್ಚಿನ ಜನರು ನಂಬಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಸಮೀಕ್ಷೆಯ ಪ್ರಕಾರ, ಶೇಕಡಾ 56 ರಷ್ಟು ಜನರು ಸಿಎಎ ಮುಸ್ಲಿಂ ಸಮುದಾಯಕ್ಕೆ ವಿರುದ್ಧವಾಗಿಲ್ಲ ಮತ್ತು ದೇಶದಲ್ಲಿ ವಾಸಿಸುವ ಅಕ್ರಮ ವಲಸಿಗರನ್ನು ಮಾತ್ರ ತಳ್ಳಿಹಾಕುತ್ತದೆ ಎಂದು ಭಾವಿಸುತ್ತಾರೆ. ಅಲ್ಲದೇ, ಭಾಗವಹಿಸಿದವರಲ್ಲಿ ಶೇಕಡಾ 32 ರಷ್ಟು ಜನರು ಕಾನೂನು ಮುಸ್ಲಿಂ ಸಮುದಾಯಕ್ಕೆ ವಿರುದ್ಧವಾಗಿದೆ ಎಂದು ಭಾವಿಸುತ್ತಾರೆ. ಶೇ.8ರಷ್ಟು ಜನರು, ಈ ಕಾಯ್ದೆಯ ಬಗ್ಗೆ ತಮಗೆ ತಿಳಿದಿಲ್ಲ ಎಂದು ಹೇಳಿದರೆ, 4 ಪ್ರತಿಶತದಷ್ಟು ಜನರು ಸಿಎಎ ಎಲ್ಲರ ವಿರುದ್ಧವಾಗಿದೆ ಎಂದು ಹೇಳಿದ್ದಾರೆ.
ಮುಸ್ಲಿಮರಲ್ಲಿ ಶೇಕಡಾ 63 ರಷ್ಟು ಜನರು ಈ ಕಾಯ್ದೆಗೆ ವಿರುದ್ಧವಾಗಿದ್ದಾರೆ, ಶೇ.35 ಮಂದಿ ಇದನ್ನು ಬೆಂಬಲಿಸಿದ್ದಾರೆ ಮತ್ತು ಶೇಕಡಾ 1 ರಷ್ಟು ಜನರು ತಮಗೆ ತಿಳಿದಿಲ್ಲ ಅಥವಾ ಪ್ರತಿಕ್ರಿಯಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಹಿಂದೂಗಳಲ್ಲಿ, ಶೇಕಡಾ 67 ರಷ್ಟು ಜನರು ಈ ಕಾಯ್ದೆಯನ್ನು ಬೆಂಬಲಿಸಿದ್ದಾರೆ ಮತ್ತು 32 ಪ್ರತಿಶತದಷ್ಟು ಜನರು ಇದನ್ನು ವಿರೋಧಿಸಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವ ನಿರ್ಧಾರದ ಬಗ್ಗೆ ನೀವು ಸರ್ಕಾರವನ್ನು ಬೆಂಬಲಿಸುತ್ತೀರಾ ಎಂದು ಕೇಳಿದಾಗ, ಶೇಕಡಾ 62 ರಷ್ಟು ಜನರು ಹೌದು ಎಂದು ಹೇಳಿದರು. ಆದರೆ, ಶೇಕಡಾ 37 ರಷ್ಟು ಜನರು ಈ ವಿವಾದಾತ್ಮಕ ಕಾನೂನಿನ ವಿಷಯದಲ್ಲಿ ಸರ್ಕಾರವನ್ನು ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ.
ಸಿಎಎ ಕುರಿತು ಸರ್ಕಾರ ಮತ್ತು ವಿರೋಧ ಪಕ್ಷಗಳು ತೆಗೆದುಕೊಂಡ ನಿಲುವನ್ನು ಬೆಂಬಲಿಸುತ್ತಾರೆಯೇ ಎಂಬ ಪ್ರಶ್ನೆಗೆ, ದೇಶಾದ್ಯಂತ ಶೇಕಡಾ 59 ಜನರು ಸರ್ಕಾರದತ್ತ ಒಲವು ತೋರಿದರೆ, ಶೇಕಡಾ 32 ರಷ್ಟು ಜನರು ವಿರೋಧ ಪಕ್ಷಗಳನ್ನು ಬೆಂಬಲಿಸಿದ್ದಾರೆ.
ಸಿಎಎ ಕುರಿತು ಸರ್ಕಾರದ ನಿಲುವನ್ನು ಬೆಂಬಲಿಸುವಲ್ಲಿ ಹಿಂದೂಗಳು ಮತ್ತು ಮುಸ್ಲಿಮರು ವಿಭಜನೆಗೊಂಡಿದ್ದಾರೆ, ಏಕೆಂದರೆ ಶೇಕಡಾ 67 ರಷ್ಟು ಹಿಂದೂಗಳು ಸರ್ಕಾರದ ಪರವಾಗಿ ಮತ ಚಲಾಯಿಸಿದರೆ, ಶೇಕಡಾ 71 ರಷ್ಟು ಮುಸ್ಲಿಮರು ಈ ಕಾಯ್ದೆಯ ಬಗ್ಗೆ ವಿರೋಧ ಪಕ್ಷಗಳು ತೆಗೆದುಕೊಂಡ ನಿಲುವನ್ನು ಬೆಂಬಲಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.