ನವದೆಹಲಿ: ನಿರ್ಭಯಾ ಸಾಮೂಹಿಕ ಅತ್ಯಾಚಾರಿಗಳನ್ನು ಮಹಿಳೆಯೊಬ್ಬರ ಕೈಯಿಂದಲೇ ಗಲ್ಲಿಗೇರಿಸಬೇಕು ಎಂದು ಅಂತಾರಾಷ್ಟ್ರೀಯ ಶೂಟರ್ ವರ್ತಿಕಾ ಸಿಂಗ್ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ರಕ್ತದಲ್ಲಿ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ.
“ನಿರ್ಭಯಾ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಾಲ್ವರನ್ನು ಗಲ್ಲಿಗೇರಿಸಲು ನನಗೆ ಅವಕಾಶ ನೀಡಬೇಕು. ಇದು ಮಹಿಳೆಯೊಬ್ಬಳು ಮರಣದಂಡನೆಯನ್ನು ವಿಧಿಸಬಹುದು ಎಂಬ ಸಂದೇಶವನ್ನು ದೇಶಾದ್ಯಂತ ರವಾನಿಸುತ್ತದೆ. ಅತ್ಯಾಚಾರಿಗಳಿಗೂ ಮಹಿಳೆಯು ಮರಣದಂಡನೆಯನ್ನು ವಿಧಿಸಬಲ್ಲಳು ಎಂಬ ಪಾಠಗಳನ್ನು ಕಲಿಸುತ್ತದೆ. ನಟಿಯರು, ಸಂಸದರು ನನ್ನನ್ನು ಬೆಂಬಲಿಸಬೇಕು ಎಂದು ನಾನು ಕೋರುತ್ತೇನೆ. ಇದು ಸಮಾಜದಲ್ಲಿ ಬದಲಾವಣೆಯನ್ನು ತರುತ್ತದೆ ಎಂದು ನಾನು ಭಾವಿಸುತ್ತೇನೆ. ಮಹಿಳೆಯರು ಭಯದಿಂದ ಬದುಕಬಾರದು “ಎಂದು ವರ್ತಿಕಾ ಸಿಂಗ್ ಹೇಳಿದ್ದಾರೆ.
23 ವರ್ಷದ ಪ್ಯಾರಾಮೆಡಿಕಲ್ ವಿದ್ಯಾರ್ಥಿನಿಯನ್ನು 2012 ರ ಡಿಸೆಂಬರ್ 16 ರಂದು ಚಲಿಸುವ ಬಸ್ನಲ್ಲಿ ಸಾಮೂಹಿಕ ಅತ್ಯಾಚಾರ ಮಾಡಿ, ಆಕೆಯ ಮೇಲೆ ಮಾರಣಾಂತಿಕ ಹಲ್ಲೆಗಳನ್ನು ನಡೆಸಲಾಗಿತ್ತು, ಕೆಲವು ದಿನಗಳ ಚಿಕಿತ್ಸೆಯ ಬಳಿಕ ಆಕೆ ಇಹಲೋಕವನ್ನು ತ್ಯಜಿಸಿದ್ದಳು.
ಸುಪ್ರೀಂ ಕೋರ್ಟ್ನ ಮೂವರು ನ್ಯಾಯಾಧೀಶರ ಪೀಠವು 2012 ರ ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪರಾಧಿಗಳಲ್ಲಿ ಒಬ್ಬ ಸಲ್ಲಿಸಿರುವ ಮರು ಪರಿಶೀಲನಾ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಲಿದೆ. ಆರು ಜನರಲ್ಲಿ ಒಬ್ಬ ಅಪ್ರಾಪ್ತ ವಯಸ್ಕ ಮತ್ತು ಆತ ಬಾಲಾಪರಾಧಿ ನ್ಯಾಯ ನ್ಯಾಯಾಲಯದಡಿ ಶಿಕ್ಷೆ ಪಡೆಯುತ್ತಿದ್ದಾನೆ. ಮತ್ತೊಬ್ಬ ಆರೋಪಿ ತಿಹಾರ್ ಜೈಲಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೆಹಲಿ ಹೈಕೋರ್ಟ್ ಆದೇಶದ ವಿರುದ್ಧ ಮುಖೇಶ್, ಅಕ್ಷಯ್, ಪವನ್ ಮತ್ತು ವಿನಯ್ ಎಂಬ ನಾಲ್ವರು ಅಪರಾಧಿಗಳು ಸುಪ್ರೀಂ ಕೋರ್ಟ್ನ ಬಾಗಿಲು ಬಡಿದಿದ್ದರು, ಆದರೆ ಸುಪ್ರೀಂ ಅವರಿಗೆ ಸೆಪ್ಟೆಂಬರ್ 2013 ರಲ್ಲಿ ವಿಚಾರಣಾ ನ್ಯಾಯಾಲಯ ನೀಡಿದ ಮರಣದಂಡನೆಯ ಆದೇಶವನ್ನು ದೃಢಪಡಿಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.