ನವದೆಹಲಿ: ಭಯೋತ್ಪಾದನೆಯನ್ನು ಉತ್ತೇಜಿಸುವುದಕ್ಕೆ ಮತ್ತು ಉಗ್ರ ಶಿಬಿರಗಳಿಗೆ ಕಲ್ಪಿಸುವುದಕ್ಕೆ ಖ್ಯಾತಿ ಹೊಂದಿರುವ ಪಾಕಿಸ್ಥಾನ ನಿರಂತರ ವಿಶ್ವ ಸಮುದಾಯದ ಟೀಕೆಗೆ ಒಳಗಾಗುತ್ತಲೇ ಇದೆ. ಭಯೋತ್ಪಾದನೆ ಬಗ್ಗೆ ಶೂನ್ಯ ಸಹಿಷ್ಣುತಾ ನೀತಿಯನ್ನು ಅನುಸರಿಸುತ್ತಿರುವ ಭಾರತ, ಇದೀಗ ಪಾಕಿಸ್ಥಾನ ಸ್ಥಾಪನೆ ಮಾಡಿರುವ ಕಾಶ್ಮೀರಿ ಸೆಲ್ಗಳು ಅಥವಾ ಕಾಶ್ಮೀರಿ ಡೆಸ್ಕ್ಗಳ ವಿರುದ್ಧ ಧ್ವನಿಯೆತ್ತಿದೆ.
ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ರಾಜ್ಯದ ಸಚಿವ ಬಿ ಮುರಳೀಧರನ್ ಅವರು ಲೋಕಸಭೆಗೆ ಮಾಹಿತಿಯನ್ನು ನೀಡಿದ್ದು, ಪಾಕಿಸ್ಥಾನದ ಕಾಶ್ಮೀರಿ ಸೆಲ್ಸ್ ಅಥವಾ ಕಾಶ್ಮೀರ ಡಿಸ್ಕ್ ವಿರುದ್ಧ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಪಾಕಿಸ್ಥಾನ ಬಹಿರಂಗವಾಗಿ ಹಿಂಸೆಯನ್ನು ಪ್ರಚೋದಿಸುತ್ತದೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ ಎಂದಿದ್ದಾರೆ.
ಪಾಕಿಸ್ಥಾನ ಮತ್ತು ವಿವಿಧ ರಾಷ್ಟ್ರಗಳಲ್ಲಿ ಇರುವ ಪಾಕಿಸ್ಥಾನದ ರಾಯಭಾರ ಕಚೇರಿಗಳಲ್ಲಿ ಕಾಶ್ಮೀರಿ ಸೆಲ್ ಅಥವಾ ಕಾಶ್ಮೀರಿ ಡೆಸ್ಕ್ಗಳನ್ನು ಸ್ಥಾಪನೆ ಮಾಡುವುದಾಗಿ ಪಾಕಿಸ್ಥಾನದ ವಿದೇಶಾಂಗ ಸಚಿವರು ಘೋಷಣೆ ಮಾಡಿದ್ದಾರೆ. ಈ ಸೆಲ್ಗಳ ಮೂಲಕ ಸ್ಥಳೀಯ ಜನರನ್ನು ಮೂಲಭೂತವಾದಿಗಳನ್ನಾಗಿಸಿ, ಆ ಮೂಲಕ ತನ್ನ ಅಜೆಂಡಾವನ್ನು ಸಾಕಾರಗೊಳಿಸುವುದು ಪಾಕಿಸ್ಥಾನದ ಯೋಜನೆಯಾಗಿದೆ ಎಂದು ಸಚಿವರು ಹೇಳಿದ್ದಾರೆ. ತಮ್ಮ ನೆಲದಲ್ಲಿರುವ ಇಂತಹ ಸೆಲ್ಗಳ ವಿರುದ್ಧ ಕ್ರಮ ಜರುಗಿಸುವಂತೆ ವಿವಿಧ ದೇಶಗಳಿಗೆ ಮನವಿಯನ್ನು ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
ಸರಕಾರವು ಅಂತರರಾಷ್ಟ್ರೀಯ ಸಮುದಾಯಕ್ಕೆ ಪಾಕಿಸ್ಥಾನದ ಕೆಟ್ಟ ಉದ್ದೇಶ ಮತ್ತು ಅದರ ಭಾರತದ ವಿರುದ್ಧದ ಗಡಿಯಾಚೆಗಿನ ಭಯೋತ್ಪಾದನೆಯ ಬಗ್ಗೆ ಸವಿವರವಾಗಿ ವಿವರಿಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.