ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಸಾಧನೆ ಆಧಾರಿತ ಭಾರತೀಯ ವಾಯುಸೇನೆಯ ಗೇಮಿಂಗ್ ಆಪ್ ‘2019ರ ಅತ್ಯುತ್ತಮ ಆ್ಯಪ್’ ಎಂದು ಗೂಗಲ್ನಿಂದ ಪ್ರಶಂಸಿಸಲ್ಪಟ್ಟಿದೆ.
ಅತ್ಯುತ್ತಮ ಆಂಡ್ರಾಯ್ಡ್ ಆ್ಯಪ್ಗಳ ಪಟ್ಟಿಯಲ್ಲಿ ಭಾರತೀಯ ವಾಯುಸೇನೆಯ ಗೇಮಿಂಗ್ ಆ್ಯಪ್ ಅನ್ನು ಪಟ್ಟಿ ಮಾಡಲಾಗಿದೆ. ಈ ಗೇಮಿಂಗ್ ಆ್ಯಪ್ ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಜನರ ಅಚ್ಚುಮೆಚ್ಚಿನ ಆ್ಯಪ್ ಆಗಿದೆ.
‘ಇಂಡಿಯನ್ ಏರ್ ಫೋರ್ಸ್: ಅ ಕಟ್ ಎಬೋ’ ಎಂಬ ಹೆಸರಿನ ಆ್ಯಪ್, ಆಂಡ್ರಾಯ್ಡ್ ಮತ್ತು iOS ಎರಡರಲ್ಲೂ ಲಭ್ಯವಿದೆ.
ಈ ಆ್ಯಪ್ 2019ರ ಯೂಸರ್ಸ್ ಚಾಯ್ಸ್ ವಿನ್ನರ್ಸ್ ಭಾಗವಾಗಿದೆ ಮತ್ತು 2019ರ ಅತ್ಯಂತ ಪ್ರಸಿದ್ಧ ಗೇಮ್ಗಳ ಪಟ್ಟಿಯಲ್ಲಿ ಟಾಪ್ 10ರಲ್ಲಿ ಕಾಣಿಸಿಕೊಂಡಿದೆ.
ಈ ಗೇಮ್ ಅನ್ನು ದೆಹಲಿ ಮೂಲದ ತ್ರೆಯೆ ಇಂಟರ್ಯಾಕ್ಟಿವ್ ಅಭಿವೃದ್ಧಿಪಡಿಸಿದೆ. ಇದೇ ಸಂಸ್ಥೆ 2019ರಲ್ಲಿ ಭಾರತೀಯ ವಾಯುಸೇನೆಗಾಗಿ ‘ಗಾರ್ಡಿಯನ್ಸ್ ಆಫ್ ಸ್ಕೈಸ್ ‘ ಎಂಬ ಹೆಸರಿನ ಗೇಮ್ ಅನ್ನು ಅಭಿವೃದ್ಧಿಪಡಿಸಿತ್ತು.
ಈ ಬಾರಿ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರ ಯಶೋಗಾಥೆಯನ್ನು ಆಧರಿಸಿ ಗೇಮ್ ಅನ್ನು ಅಭಿವೃದ್ಧಿಪಡಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.