ನವದೆಹಲಿ: 70,000 ಕಾರ್ಯಪಡೆ ಹೊಂದಿರುವ ವಿಶ್ವದ ಅತಿದೊಡ್ಡ ಮೊಬೈಲ್ ಉತ್ಪಾದನಾ ಘಟಕ ಸ್ಯಾಮ್ಸಂಗ್ ಇಂಡಿಯಾ ಭಾರತದಲ್ಲಿ 10 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದ ಮೊದಲ ಸ್ಮಾರ್ಟ್ಫೋನ್ ಮತ್ತು ಕಂಸ್ಯೂಮರ್ ಎಲೆಕ್ಟ್ರಾನಿಕ್ಸ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಭಾರತದಲ್ಲಿ ಕಾರ್ಯಾಚರಣೆಯನ್ನು ಆರಂಭಿಸಿ 25 ವರ್ಷಗಳು ಪೂರ್ಣಗೊಳ್ಳುವ ಸಂದರ್ಭದಲ್ಲಿ ಸ್ಯಾಮ್ಸಂಗ್ ಈ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ರಿಜಿಸ್ಟರ್ ಆಫ್ ಕಂಪನೀಸ್ನ ಇತ್ತೀಚಿನ ರೆಗುಲೇಟರ್ ಫೈಲಿಂಗ್ಸ್ ಪ್ರಕಾರ, ಸ್ಯಾಮ್ಸಂಗ್ ಇಂಡಿಯಾವು 10 ಬಿಲಿಯನ್ ಡಾಲರ್ ಆದಾಯವನ್ನು ಗಳಿಸಿದೆ.
ದಕ್ಷಿಣ ಕೊರಿಯಾದ ತಂತ್ರಜ್ಞಾನ ದಿಗ್ಗಜ ಕಂಪನಿಯಾದ ಸ್ಯಾಮ್ಸಂಗ್ ವಿಶ್ವದ ಅತಿ ದೊಡ್ಡ ಸ್ಮಾರ್ಟ್ ಫೋನ್ ತಯಾರಕನು ಹೌದು. 2018-19ನೇ ಸಾಲಿನಲ್ಲಿ ಈ ಕಂಪನಿಯು ರೂ. 73,086 ಕೋಟಿ ಆದಾಯವನ್ನು ಗಳಿಸಿದೆ. ತನ್ನ ಎಲ್ಲಾ ಸ್ಮಾರ್ಟ್ಫೋನ್ ಮತ್ತು ಕನ್ಸ್ಯೂಮರ್ ಡ್ಯುರೇಬಲ್ ಡಿವಿಷನ್ಗಳಾದ್ಯಂತ ಅತ್ಯುತ್ತಮ ಪ್ರದರ್ಶನಗಳನ್ನು ನೀಡಿದೆ ಎಂದು ರಿಜಿಸ್ಟರ್ ಆಫ್ ಕಂಪನೀಸ್ ತನ್ನ ವರದಿಯಲ್ಲಿ ಹೇಳಿದೆ.
2019ರ ಹಣಕಾಸು ವರ್ಷದಲ್ಲಿ ಸ್ಯಾಮ್ಸಂಗ್ ಇಂಡಿಯಾವು ತನ್ನ ಆದಾಯದಲ್ಲಿ ಶೇಕಡ 20ರಷ್ಟು ಏರಿಕೆಯನ್ನು ಕಂಡಿದೆ. 2018ರ ಹಣಕಾಸು ವರ್ಷಕ್ಕಿಂತ ಶೇಕಡ 10 ರಷ್ಟು ಪ್ರಗತಿ ದರವನ್ನು ಹೆಚ್ಚಿಸಿಕೊಂಡಿದೆ.
ರಿಜಿಸ್ಟರ್ ಆಫ್ ಕಂಪನೀಸ್ ವರದಿಯ ಪ್ರಕಾರ, 2018ರ ಹಣಕಾಸು ವರ್ಷದಲ್ಲಿ ಸ್ಯಾಮ್ಸಂಗ್ ಇಂಡಿಯಾ ಕಂಪನಿಯ ರೂ. 61,066 ಕೋಟಿ ಆದಾಯವನ್ನು ಗಳಿಸಿತ್ತು.
ಸ್ಯಾಮ್ಸಂಗ್ ಇಂಡಿಯಾದ ಸ್ಮಾರ್ಟ್ಫೋನ್ ವಿಭಾಗವು ಆದಾಯಕ್ಕೆ ಅತಿ ಹೆಚ್ಚಿನ ಕೊಡುಗೆಯನ್ನು ನೀಡಿದೆ. ರೂ.43,087 ಕೋಟಿ ಮೊತ್ತದ ಮೊಬೈಲ್ ಫೋನ್ಗಳನ್ನು ಇದು ಮಾರಾಟ ಮಾಡಿದೆ. ಇದು ಒಟ್ಟು ಆದಾಯದಲ್ಲಿ ಶೇಕಡ 60ರಷ್ಟು ಕೊಡುಗೆಯನ್ನು ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.