ನವದೆಹಲಿ: 2020ರ ಹಜ್ ಯಾತ್ರೆಯ ಸಂಪೂರ್ಣ ಪ್ರಕ್ರಿಯೆಯನ್ನು ಶೇಕಡ 100 ರಷ್ಟು ಡಿಜಿಟಲೀಕರಣಗೊಳಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ ಎಂದು ಕೇಂದ್ರ ಅಲ್ಪಸಂಖ್ಯಾತ ಕಲ್ಯಾಣ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.
ಸೌದಿಯ ಹಜ್ ಸಚಿವ ಡಾ. ಮೊಹಮ್ಮದ್ ಸಲೆಹ್ ಬಿನ್ ತಹೆರ್ ಬೆಂತನ್ ಅವರೊಂದಿಗೆ ನಖ್ವಿ ಅವರು ಜೆದ್ದಾದಲ್ಲಿ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ ನಂತರ ಈ ಬೆಳವಣಿಗೆ ನಡೆದಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಖ್ವಿ, “ಆನ್ಲೈನ್ ಅಪ್ಲಿಕೇಶನ್ ಇ-ವೀಸಾ, ಹಜ್ ಮೊಬೈಲ್ ಆಪ್, ‘e-MASIHA’ ಆರೋಗ್ಯ ಸೌಲಭ್ಯ, ‘ಈ ಲಗೇಜ್ ಪ್ರೀ ಟ್ಯಾಗಿಂಗ್’ಗಳು ಮೆಕ್ಕಾ ಮತ್ತು ಮದೀನಾ ಯಾತ್ರೆಗೆ ಸಂಬಂಧಿಸಿದ ಸಾರಿಗೆ, ವಸತಿ ಮುಂತಾದ ಎಲ್ಲವುದರಗಳ ಬಗ್ಗೆಯೂ ಮಾಹಿತಿಯನ್ನು ನೀಡುತ್ತದೆ. 2020ರ ಹಜ್ ಯಾತ್ರೆಗೆ ಎರಡು ಲಕ್ಷ ಭಾರತೀಯರು ತೆರಳುತ್ತಿದ್ದಾರೆ” ಎಂದಿದ್ದಾರೆ.
ಇದೇ ಮೊದಲ ಬಾರಿಗೆ ಯಾತ್ರಾರ್ಥಿಗಳ ಬ್ಯಾಗೇಜ್ಗಳಿಗೆ ಡಿಜಿಟಲ್ ಫ್ರೀ ಟ್ಯಾಗಿಂಗ್ ಸೌಲಭ್ಯವನ್ನು ಒದಗಿಸಲಾಗುತ್ತಿದೆ. ಯಾತ್ರಾರ್ಥಿಗಳಿಗೆ ಮೀಸಲಿಟ್ಟ ಕಟ್ಟಡ ಮತ್ತು ಕೋಣೆ, ಸಾರಿಗೆ ಮಾಹಿತಿ ಮುಂತಾದ ಎಲ್ಲಾ ಸೌಲಭ್ಯಗಳು ಕೂಡ ಡಿಜಿಟಲೀಕರಣಗೊಂಡಿದೆ ಎಂದಿದ್ದಾರೆ.
ಹಜ್ ಪ್ರಕ್ರಿಯೆಯ ಬಗ್ಗೆ ಮಾಹಿತಿಯನ್ನು ನೀಡುವ ಸಲುವಾಗಿ ಮುಂಬೈಯಲ್ಲಿ 100 ಮಾಹಿತಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.