News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ
Saturday, 23rd November 2024


×
Home About Us Advertise With s Contact Us

2018 ರಿಂದ ಭಾರತದಲ್ಲಿ ಲಂಚ ಪ್ರಮಾಣ ಶೇ. 10 ರಷ್ಟು ಕಡಿಮೆ : ಸಮೀಕ್ಷೆ

ನವದೆಹಲಿ: ಕಳೆದ ವರ್ಷದಿಂದ ಭಾರತದಲ್ಲಿ ಲಂಚ ಕೊಡುವ ಪ್ರಕರಣಗಳು ಶೇಕಡ 10 ರಷ್ಟು ಕಡಿಮೆಯಾಗಿದೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ. ಒಟ್ಟು 20 ರಾಜ್ಯಗಳಲ್ಲಿ ನಡೆಸಲಾದ ಸಮೀಕ್ಷೆಯಿಂದ ಈ ಅಂಶ ತಿಳಿದುಬಂದಿದೆ.

ದೆಹಲಿ, ಹರಿಯಾಣ, ಗುಜರಾತ್, ಪಶ್ಚಿಮ ಬಂಗಾಳ, ಕೇರಳ, ಗೋವಾ ಮತ್ತು ಒರಿಸ್ಸಾಗಳಲ್ಲಿ ಜನರು ಭ್ರಷ್ಟಾಚಾರವನ್ನು ಕಡಿಮೆ ಎದುರಿಸಿದ್ದಾರೆ. ಆದರೆ ರಾಜಸ್ಥಾನ, ಬಿಹಾರ, ಕರ್ನಾಟಕ, ತೆಲಂಗಾಣ, ತಮಿಳುನಾಡು, ಜಾರ್ಖಂಡ್ ಮತ್ತು ಪಂಜಾಬ್ ರಾಜ್ಯಗಳಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ಬೆಳಕಿಗೆ ಬಂದಿವೆ.

‘ಇಂಡಿಯಾ ಕರಪ್ಶನ್ ಸರ್ವೆ 2019’ ಅನ್ನು ಟ್ರಾನ್ಸ್‌ಪೆರೆನ್ಸಿ ಇಂಟರ್ನ್ಯಾಷನಲ್ ಇಂಡಿಯಾ ಮತ್ತು ಲೋಕಲ್ ಸರ್ಕಲ್ಸ್ ನಡೆಸಿದ್ದು, 20 ರಾಜ್ಯಗಳ 248 ಜಿಲ್ಲೆಗಳಲ್ಲಿ ಸಮೀಕ್ಷೆಯನ್ನು ನಡೆಸಲಾಗಿದೆ. ಒಂದು ಲಕ್ಷದ 90 ಸಾವಿರ ಜನರನ್ನು ಸಮೀಕ್ಷೆಗೆ ಒಳಪಡಿಸಲಾಗಿದೆ. ಸಮೀಕ್ಷೆಗೆ ಒಳಪಟ್ಟ ಶೇಕಡ 51 ರಷ್ಟು ಮಂದಿ ಭಾರತೀಯರು ಕಳೆದ ಹನ್ನೆರಡು ತಿಂಗಳುಗಳಲ್ಲಿ ಲಂಚವನ್ನು ಪಾವತಿಸಿದ್ದಾರೆ.

ಭ್ರಷ್ಟಾಚಾರ ಸೂಚ್ಯಂಕ 2018 ರಲ್ಲಿ ಟ್ರಾನ್ಸ್‌ಪೆರನ್ಸಿ ಇಂಟರ್ನ್ಯಾಷನಲ್ ಇಂಡಿಯಾ ಬಿಡುಗಡೆ ಮಾಡಿದೆ, ಇದರಲ್ಲಿ ಭಾರತವೂ 3 ಸ್ಥಾನಗಳ ಸುಧಾರಣೆಯನ್ನು ಕಂಡಿದೆ. ಇದೀಗ 180 ರಾಷ್ಟ್ರಗಳ ಪೈಕಿ ಭಾರತವೂ ಭ್ರಷ್ಟಾಚಾರದಲ್ಲಿ 78 ನೇ ಸ್ಥಾನದಲ್ಲಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top