ನವದೆಹಲಿ : 2019 ರ ಆಧಾರ್ ವರದಿಯನ್ನು ಸೋಮವಾರ ಬಿಡುಗಡೆಗೊಳಿಸಲಾಗಿದ್ದು, ಶೇ. 72 ರಷ್ಟು ಸಮೀಕ್ಷೆಗೊಳಪಟ್ಟ ಜನರು 12 ಅಂಕಿಗಳ ವಿಶೇಷ ಗುರುತಿನ ಸಂಖ್ಯೆಯು ಅನುಕೂಲಕರವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಆದರೆ ಮೂರನೇ ಒಂದರಷ್ಟು ಜನರು ಆಧಾರ್ ತಿದ್ದುಪಡಿ ಪ್ರಕ್ರಿಯೆಯನ್ನು ಕಷ್ಟದಾಯಕ ಎಂದು ಪರಿಗಣಿಸಿದ್ದಾರೆ.
ದಲ್ಬರ್ಗ್ ಈ ಸಮೀಕ್ಷೆಯನ್ನು ಹೊರತಂದಿದ್ದು, ಒಮಿದ್ಯಾರ್ ನೆಟ್ವರ್ಕ್ ಇಂಡಿಯಾ ಇದಕ್ಕೆ ಅನುದಾನ ನೀಡಿದೆ. ಸುಮಾರು 167,000 ಭಾರತೀಯ ನಿವಾಸಿಗಳನ್ನು ಒಳಪಡಿಸಿದ ಎರಡು ರಾಷ್ಟ್ರೀಯ ಸಮೀಕ್ಷೆಗಳನ್ನು ಒಟ್ಟುಗೂಡಿಸಿ ಈ ವರದಿಯನ್ನು ತಯಾರಿಸಲಾಗಿದೆ.
ಆಧಾರ್ಗೆ ನೋಂದಾಯಿಸಲ್ಪಟ್ಟ ಶೇ.92ರಷ್ಟು ಜನರು ತೃಪ್ತಿಯನ್ನು ವ್ಯಕ್ತಪಡಿಸಿದ್ದಾರೆ, ಶೇಕಡ 90ರಷ್ಟು ಜನರು ಆಧಾರ್ ವ್ಯವಸ್ಥೆಯಡಿ ತಮ್ಮ ದಾಖಲೆಗಳು ಸುರಕ್ಷಿತವಾಗಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಹೊರತಾಗಿಯೂ ಸಿಮ್ ಕಾರ್ಡ್ ಮತ್ತು ಬ್ಯಾಂಕ್ ಖಾತೆಯನ್ನು ತೆರೆಯಲು ಆಧಾರ್ ಕಡ್ಡಾಯವಾಗಿ ಕೇಳಲಾಗುತ್ತಿದೆ ಎಂದು ಕೆಲವರು ಆರೋಪಿಸಿದ್ದಾರೆ.
ಆಧಾರ್ ಅಪ್ಡೇಟ್ ಪ್ರಕ್ರಿಯೆಗಳು ತ್ರಾಸದಾಯಕವಾಗಿತ್ತು, ಅವುಗಳು ಸರಳಗೊಂಡರೆ ಉತ್ತಮ ಎಂಬ ಅಭಿಪ್ರಾಯವನ್ನು ಅನೇಕರು ವ್ಯಕ್ತಪಡಿಸಿದ್ದಾರೆ.
ಶೇ.80ರಷ್ಟು ಮಂದಿ ಆಧಾರ್ನಿಂದಾಗಿ ಸಾಮಾಜಿಕ ಕಲ್ಯಾಣ ಯೋಜನೆಗಳು ಸಮರ್ಪಕಗೊಂಡಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.