ನವದೆಹಲಿ: ಬಿಹಾರದ ವಿಧಾನ ಪರಿಷತ್ ಚುನಾವಣೆಯಲ್ಲಿ ಎನ್ಡಿಎ ಎದುರು ಹೀನಾಯವಾಗಿ ಸೋಲಿನ ಬಳಿಕ ಇದೀಗ ಆರ್ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಅವರು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಯೋಜನೆ ಮಾಡುತ್ತಿರುವ ಇಫ್ತಾರ್ ಕೂಟಕ್ಕೆ ಆಗಮಿಸದಿರಲು ನಿರ್ಧರಿಸಿದ್ದಾರೆ.
ಜುಲೈ 13ರಂದು ಸೋನಿಯಾ ಇಫ್ತಾರ್ ಕೂಟ ಆಯೋಜಿಸುತ್ತಿದ್ದಾರೆ, ಆದರೆ ಇದಕ್ಕೆ ಗೈರು ಆಗಲಿರುವ ಲಾಲೂ ಅದೇ ದಿನ ಪ್ರತ್ಯೇಕ ಇಫ್ತಾರ್ ಕೂಟವನ್ನು ಆಯೋಜಿಸಲಿದ್ದಾರೆ. ಅಲ್ಲದೇ ಅದೇ ದಿನ ಗವರ್ನರ್ ನಿವಾಸದ ಎದುರು ಕೇಂದ್ರ ಜಾತಿ ಸಮೀಕ್ಷೆಯನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ಧರಣಿ ನಡೆಸಲಿದ್ದಾರೆ ಎನ್ನಲಾಗಿದೆ.
ಅಷ್ಟೇ ಅಲ್ಲದೇ ಸೋನಿಯಾ ಇಫ್ತಾರ್ ಕೂಟಕ್ಕೆ ಯಾವುದೇ ಪ್ರತಿನಿಧಿಗಳನ್ನು ಕಳುಹಿಸಲು ಕೂಡ ಲಾಲೂ ನಿರಾಕರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಹಾರ ಚುನಾವಣೆಯನ್ನು ಎದುರಿಸುವ ಸಲುವಾಗಿ ಆರ್ಜೆಡಿ, ಜೆಡಿಯು, ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿವೆ, ಆದರೆ ವಿಧಾನ ಪರಿಷತ್ ಸೋಲಿನ ಬಿಸಿ ಈ ಮೂರು ಪಕ್ಷಗಳ ಮೈತ್ರಿಯಲ್ಲಿ ಅಸ್ಥಿರ ಮೂಡಿಸಿದೆ. ಲಾಲೂ ಅವರು ಗೈರಾಗಲು ಇದೂ ಕಾರಣವಿರಬಹುದು ಎನ್ನಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.