ನವದೆಹಲಿ: ಇದೇ ಮೊದಲ ಬಾರಿಗೆ ಅರೆಸೈನಿಕ ಪಡೆ (ಸಿಐಎಸ್ಎಫ್) ರಕ್ಷಣಾ ಮತ್ತು ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್)ಯ ಸುಮಾರು 1.2 ಲಕ್ಷ ನಿವೃತ್ತ ಸಿಬ್ಬಂದಿಯನ್ನು ನೇಮಿಸಿಕೊಳ್ಳಲು ಯೋಜಿಸುತ್ತಿದೆ.
ಗೃಹ ಸಚಿವಾಲಯದ ಅಧೀನದಲ್ಲಿ ಇರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯು ರಕ್ಷಣೆ ಮತ್ತು ಸಿಎಪಿಎಫ್ ನಿವೃತ್ತ ಸಿಬ್ಬಂದಿಯನ್ನು ತಮ್ಮ ಪಡೆಗೆ ನೇಮಿಸಿಕೊಳ್ಳುವ ಸಲುವಾಗಿ ಈಗಾಗಲೇ ನೀಲನಕ್ಷೆ ಸಿದ್ಧಪಡಿಸಿದೆ ಎಂದು ಗುರುವಾರ ವರದಿ ತಿಳಿಸಿದೆ.
ಸಿಐಎಸ್ಎಫ್ ಅನ್ನು ನಿಯೋಜಿಸಬಹುದಾದಂತಹ ಖಾಸಗಿ ವಲಯದ ದೊಡ್ಡ ಕೈಗಾರಿಕಾ ಸಂಸ್ಥೆಗಳನ್ನು ಗುರುತಿಸಿ ವರದಿಯನ್ನು ನೀಡುವಂತೆ ಸಿಐಎಸ್ಎಫ್ ಮಹಾನಿರ್ದೇಶಕರು ಎಲ್ಲಾ ಇನ್ಸ್ಪೆಕ್ಟರ್ ಜನರಲ್ (ಐಜಿ)ಗಳಿಗೆ ಸೂಚನೆಯನ್ನು ನೀಡಿದ್ದಾರೆ.
ಅದರಂತೆ, ಸಿಐಎಸ್ಎಫ್ ಬಲವನ್ನು 1,80,000 ರಿಂದ 3,00,000 ಹುದ್ದೆಗಳಿಗೆ ಏರಿಸುವ ಮತ್ತು 16 ಹೆಚ್ಚುವರಿ ರಿಸರ್ವ್ ಬೆಟಾಲಿಯನ್ ಸ್ಥಾಪನೆ ಮಾಡುವ ಪರಿಷ್ಕೃತ ಪ್ರಸ್ತಾಪವನ್ನು ನವೆಂಬರ್ 5ರಂದು ಗೃಹಸಚಿವಾಲಯಕ್ಕೆ ಕಳುಹಿಸಿಕೊಡಲಾಗಿದೆ.
ಸೆಪ್ಟೆಂಬರ್ 23 ರಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಭೆ ನಡೆದ ಬಳಿಕ ಗೃಹ ಸಚಿವಾಲಯವು ಸಿಐಎಸ್ಎಫ್ಗೆ, ನಿವೃತ್ತ ರಕ್ಷಣಾ ಮತ್ತು ಸಿಎಪಿಎಫ್ ಮಾಜಿ ಸಿಬ್ಬಂದಿಯನ್ನು ಐದು ವರ್ಷಗಳ ಕಾಲ ಒಪ್ಪಂದದ ಆಧಾರದಲ್ಲಿ ನೇಮಕ ಮಾಡಿಕೊಳ್ಳಬೇಕು ಮತ್ತು ಸಿಐಎಸ್ಎಫ್ ಸಿಬ್ಬಂದಿಯನ್ನು 3:2 ಅನುಪಾತದಲ್ಲಿ ಮರು ರಚನೆ ಮತ್ತು ನಿಯೋಜಿಸಲು ಎಂಎಚ್ಎ ಸಲಹೆ ನೀಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.