ಅಮೇಥಿ: ರಾಷ್ಟ್ರ ರಾಜಕಾರಣದಲ್ಲಿ ವಂಶಾಡಳಿತಕ್ಕೆ ಹೆಸರಾಗಿರುವ ಕಾಂಗ್ರೆಸ್ ಪಕ್ಷದ ಗಾಂಧಿ ಕುಟುಂಬ ಇದೀಗ ತನ್ನ ಐದನೇ ತಲೆಮಾರನ್ನು ರಾಜಕೀಯಕ್ಕೆ ಕರೆ ತರಲು ಸರ್ವ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕ ಗಾಂಧಿ ಮತ್ತು ರಾಬರ್ಟ್ ವಾದ್ರಾ ದಂಪತಿಗಳ ಪುತ್ರನಾಗಿರುವ ರೆಹಾನ್ ತನ್ನ ಮಾವ ರಾಹುಲ್ ಗಾಂಧಿಯವರ ಲೋಕಸಭಾ ಕ್ಷೇತ್ರ ಅಮೇಥಿ ಪ್ರವಾಸಕೈಗೊಂಡಿದ್ದಾರೆ.
ತನ್ನ ಇಬ್ಬರು ಗೆಳೆಯರೊಂದಿಗೆ ದುಬಾರಿ ಕಾರಿನಲ್ಲಿ ಆಗಮಿಸಿರುವ ರೆಹಾನ್ ಅಮೇಥಿಯಲ್ಲಿನ ದಲಿತರ ಮನೆಗಳಿಗೆ ಭೇಟಿ ನೀಡಿ ಅವರೊಂದಿಗೆ ಮಾತುಕತೆ ನಡೆಸಿದ್ದಾರೆ. ಅವರ ಮನೆಯಲ್ಲೇ ಊಟ ಮಾಡಿ, ಅವರ ಮನೆಯಲ್ಲೇ ರಾತ್ರಿ ಸೊಳ್ಳೆ ಪರದೆ ಹಾಕಿಕೊಂಡು ಮಲಗಿದ್ದಾರೆ.
ವಿಶೇಷವೆಂದರೆ ಅಮೇಥಿ ಕ್ಷೇತ್ರಕ್ಕೆ ರಾಹುಲ್ ಆಗಮಿಸದೆ ಅದೆಷ್ಟೋ ಸಮಯವಾಗಿದೆ, ಅಲ್ಲಲ್ಲಿ ರಾಹುಲ್ ನಾಪತ್ತೆ ಎಂಬ ಬ್ಯಾನರ್ಗಳನ್ನೂ ಹಾಕಲಾಗಿದೆ.
ಆದರೆ ಇದಕ್ಕಿದಂತೆ ಅವರ ಅಳಿಯ ಆಗಮಿಸಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ತನ್ನ ಮುಂದಿನ ಪೀಳಿಗೆಯನ್ನೂ ರಾಜಕೀಯಕ್ಕೆ ಇಳಿಸಲು ಗಾಂಧಿ ಕುಟುಂಬ ಕೈಗೊಂಡ ಮೊದಲ ಪ್ರಯತ್ನ ಇದಾಗಿರಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.