ನವದೆಹಲಿ: ಸಂವಿಧಾನ ದಿನವಾದ ನವೆಂಬರ್ 26 ರಂದು ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಾತ್ರವಲ್ಲದೇ, ಸಂವಿಧಾನ ದಿನದ ಅಂಗವಾಗಿ ಬಿಜೆಪಿಯು 10 ದಿನಗಳ ಸುದೀರ್ಫ ಕಾರ್ಯಕ್ರಮವನ್ನೂ ಆಯೋಜನೆಗೊಳಿಸಲಿದೆ.
ಪ್ರಧಾನಿ ಮೋದಿಯವರು ಈ ದಿನ ಮಾಡುವ ಭಾಷಣವನ್ನು ಸ್ಕ್ರೀನಿಂಗ್ ಮಾಡುವಂತೆ ಬಿಜೆಪಿ ರಾಷ್ಟ್ರಾಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಜಿಲ್ಲಾ ಮಟ್ಟದ ಎಲ್ಲಾ ಪಕ್ಷದ ಅಧಿಕಾರಿಗಳು ಮತ್ತು ಮುಖಂಡರುಗಳಿಗೆ ಕರೆ ನೀಡಿದ್ದಾರೆ.
ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ನವೆಂಬರ್ 27 ರಿಂದ ಡಿಸೆಂಬರ್ 6 ರವರೆಗೆ ಪ್ರಾಜ್ಞರುಗಳ ಸಭೆ ಆಯೋಜಿಸುವಂತೆ ಅವರು ಪಕ್ಷದ ಮುಖಂಡರಿಗೆ ನಿರ್ದೇಶನ ನೀಡಿದ್ದಾರೆ. ಸಭೆಗೂ ಮೊದಲು, ಭಾರತೀಯ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ್ ಅವರಿಗೆ ನಾಯಕರು ಗೌರವ ಸಲ್ಲಿಸಲಿದ್ದಾರೆ.
ಅಂಬೇಡ್ಕರ್ ಅವರು ನೀಡಿರುವ ಸಂದೇಶವು ಪಕ್ಷದ ಮುಖಂಡರಿಂದ ಸಾರ್ವಜನಿಕರಿಗೆ ತಲುಪುವಂತೆ ಮಾಡಲು ಮತ್ತು ನಾಗರಿಕರಿಗೆ ಸಂವಿಧಾನವು ನೀಡುವ ಮೂಲಭೂತ ಹಕ್ಕುಗಳು ಮತ್ತು ಮೂಲಭೂತ ಕರ್ತವ್ಯಗಳ ಬಗ್ಗೆಯೂ ಚರ್ಚೆ ನಡೆಸಬೇಕು ಎಂದು ಸೂಚನೆ ನೀಡಲಾಗಿದೆ.
ಅದೇ ರೀತಿ, ಬೌದ್ಧಿಕ ಸಭೆಗಳಲ್ಲಿ ನಾಯಕರುಗಳು ಅಂಬೇಡ್ಕರ್ ಅವರ ಕನಸನ್ನು ಈಡೇರಿಸುವ ದಿಕ್ಕಿನಲ್ಲಿ ಮೋದಿ ನೇತೃತ್ವದ ಸರ್ಕಾರ ಮಾಡಿರುವ ಕಾರ್ಯಗಳ ಬಗ್ಗೆ ಚರ್ಚಿಸಲಿದ್ದಾರೆ.
ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿರ್ದೇಶನದ ಪ್ರಕಾರ, ಸಂಸದರು, ಶಾಸಕರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಕಾರ್ಯಕ್ರಮಗಳಲ್ಲಿ ಪರಿಣಾಮಕಾರಿಯಾಗಿ ಭಾಗವಹಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.