ಮುಂಬಯಿ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಬುಧವಾರ ತಮ್ಮ ಟ್ವಿಟ್ಟರ್ ಪ್ರೊಫೈಲ್ ಬಯೋವನ್ನು ಬದಲಾಯಿಸಿಕೊಂಡು, ತಮ್ಮನ್ನು ‘ಮಹಾರಾಷ್ಟ್ರದ ಸೇವಕ್’ ಎಂದು ಬಣ್ಣಿಸಿದ್ದಾರೆ.
ಮಹಾರಾಷ್ಟ್ರದಲ್ಲಿ ಮಂಗಳವಾರ ರಾಷ್ಟ್ರಪತಿ ಆಡಳಿತ ಹೇರಿದ ಒಂದು ದಿನದ ನಂತರ ಅವರು ತಮ್ಮ ಬಯೋ ಬದಲಾಯಿಸಿಕೊಂಡಿದ್ದಾರೆ.
ಇದಕ್ಕೂ ಮೊದಲು, ನವೆಂಬರ್ 8 ರಂದು ರಾಜೀನಾಮೆ ನೀಡಿದ ನಂತರ ಫಡ್ನವೀಸ್ ತಮ್ಮ ಟ್ವಿಟ್ಟರ್ ಬಯೋವನ್ನು ನವೀಕರಿಸಿ, ಅದನ್ನು ‘ಮುಖ್ಯಮಂತ್ರಿ’ಯಿಂದ ‘ಹಂಗಾಮಿ ಮುಖ್ಯಮಂತ್ರಿ ‘ಎಂದು ಬದಲಾಯಿಸಿಕೊಂಡಿದ್ದರು.
ರಾಷ್ಟ್ರಪತಿ ಆಡಳಿತದ ಶಿಫಾರಸ್ಸಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅನುಮೋದನೆ ನೀಡಿದ ನಂತರ ಮಹಾರಾಷ್ಟ್ರವು ನಿನ್ನೆ ರಾಷ್ಟ್ರಪತಿಗಳ ಆಡಳಿತಕ್ಕೆ ಒಳಪಟ್ಟಿತು.
ಕೇಂದ್ರ ಸಚಿವ ಸಂಪುಟದ ಶಿಫಾರಸ್ಸಿನ ನಂತರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರ ವರದಿಯ ಮೇರೆಗೆ ರಾಷ್ಟ್ರಪತಿಗಳು ಈ ಅಧಿಸೂಚನೆಗೆ ಸಹಿ ಹಾಕಿದರು.
ಬಿಜೆಪಿ, ಶಿವಸೇನೆ ಮತ್ತು ಎನ್ಸಿಪಿಗಳಿಗೆ ಸರ್ಕಾರ ರಚಿಸಲು ಬೆಂಬಲ ಸಂಗ್ರಹಿಸಲು ಸಾಧ್ಯವಾಗದ ಹಿನ್ನಲೆಯಲ್ಲಿ ರಾಷ್ಟ್ರಪತಿ ಆಡಳಿತ ಅನಿವಾರ್ಯವಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.