ಕೊಯಂಬತ್ತೂರು: ಮಾರುಕಟ್ಟೆಯಲ್ಲಿ ಲಭ್ಯವಿರುವ ಸಾಮಾನ್ಯ ಸ್ಯಾನಿಟರಿ ಪ್ಯಾಡ್ಗಳ ಬಳಕೆಯಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ ಇಶಾನಾ ಎಂಬ 18 ವರ್ಷದ ತಮಿಳುನಾಡಿನ ಕೊಯಂಬತ್ತೂರಿನ ಬಾಲಕಿ, ಈಗ ಪರಿಸರ ಸ್ನೇಹಿ ಮತ್ತು ಮರುಬಳಕೆ ಮಾಡಬಹುದಾದ ಹತ್ತಿಯ ಸ್ಯಾನಿಟರಿ ನ್ಯಾಪ್ಕಿನ್ಗಳನ್ನು ಸ್ವತಃ ತಯಾರು ಮಾಡುತ್ತಿದ್ದಾಳೆ.
ಇಶಾನಾ ತಾನು ಹೊಂದಿರುವ ಪುಟ್ಟ ಕೊಠಡಿಯಲ್ಲೇ ಹೊಂದಿದ್ದ ಹತ್ತಿ ಪ್ಯಾಡ್ಗಳನ್ನು ತಯಾರಿಸುತ್ತಿದ್ದಾಳೆ, ಈ ಕೊಠಡಿಯಲ್ಲಿ ಹೊಲಿಗೆ ಯಂತ್ರ ಮತ್ತು ಇತರ ಅಗತ್ಯ ಉಪಕರಣಗಳು ಇವೆ. ಇವುಗಳನ್ನು ಬಳಸಿ ಆಕೆ ಸ್ಯಾನಿಟರಿ ಪ್ಯಾಡ್ ತಯಾರು ಮಾಡುತ್ತಾಳೆ.
“ಸಾಮಾನ್ಯ ಪ್ಯಾಡ್ಗಳ ಬಳಕೆಯಿಂದಾಗಿ ನಾನು ಆರೋಗ್ಯ ಸಮಸ್ಯೆಗಳನ್ನು ಎದುರಿಸಿದೆ. ಇದು ನನಗೆ ಹತ್ತಿಯ ಸ್ಯಾನಿಟರಿ ಪ್ಯಾಡುಗಳನ್ನು ತಯಾರಿಸಲು ಸ್ಫೂರ್ತಿ ನೀಡಿತು. ಪ್ರಸ್ತುತ, ಹತ್ತಿ ಬಟ್ಟೆಯಿಂದ ಸ್ಯಾನಿಟರಿ ಪ್ಯಾಡ್ಗಳನ್ನು ಹೇಗೆ ತಯಾರಿಸಬೇಕೆಂಬುದರ ಬಗ್ಗೆ ಹೆಚ್ಚು ಹೆಚ್ಚು ಜನರಿಗೆ ಶಿಕ್ಷಣ ನೀಡಲು ನಾನು ಬಯಸುತ್ತೇನೆ” ಎಂದು ಇಶಾನಾ ಹೇಳುತ್ತಿದ್ದಾಳೆ.
“ಸಾಮಾನ್ಯ ಸ್ಯಾನಿಟರಿ ಪ್ಯಾಡುಗಳಲ್ಲಿ ರಾಸಾಯನಿಕ ಜೆಲ್ ಬಳಸಲಾಗುತ್ತದೆ. ಇದು ಮಹಿಳೆಯರಿಗೆ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುತ್ತದೆ. ನಾನು ಅಭಿವೃದ್ಧಿಪಡಿಸಿದ ಸ್ಯಾನಿಟರಿ ಪ್ಯಾಡುಗಳನ್ನು ಹತ್ತಿ ಬಟ್ಟೆಯ ಪದರಗಳಿಂದ ತಯಾರಿಸಲಾಗುತ್ತದೆ. ಇದು ಮರುಬಳಕೆ ಮತ್ತು ಪರಿಸರ ಸ್ನೇಹಿಯಾಗಿದೆ” ಎಂದು ಇಶಾನಾ ಹೇಳುತ್ತಾಳೆ.
ಆಕೆ ತಯಾರಿಸಿ ಪ್ಯಾಡುಗಳನ್ನು ಸೈಯದ್ ಎಂಬುವವರು ಮಾರಾಟ ಮಾಡಲು ಆರಂಭಿಸಿದ್ದಾರೆ. ಅವರಿಗೆ ಉತ್ತಮ ಸ್ಪಂದನೆ ಸಿಗುತ್ತಿದೆ.
“ನಾನು 50 ಪ್ಯಾಕ್ಗಳನ್ನು ಖರೀದಿಸಿದ್ದೇನೆ, ಅದರ ಡೀಲರ್ಶಿಪ್ ಅನ್ನು ಹೊಂದಲು ನಾನು ಯೋಜಿಸುತ್ತಿದ್ದೇನೆ” ಎಂದು ಸೈಯದ್ ಹೇಳುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.