ನವದೆಹಲಿ: ಮಹಿಳಾ ವಿಜ್ಞಾನಿಗಳಾದ ಹೈದರಾಬಾದ್ನ ಸೆಲ್ಯುಲಾರ್ ಆ್ಯಂಡ್ ಮೊಲೆಕ್ಯುಲರ್ ಬಯೋಲಾಜಿ ಸೆಂಟರ್ನ ಮಂಜುಳಾ ರೆಡ್ಡಿ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ನ ಸುನೀತಾ ಸರವಗಿ ಅವರು ಸೇರಿದಂತೆ ಒಟ್ಟು ಆರು ಮಂದಿ ಈ ವರ್ಷದ ಪ್ರತಿಷ್ಠಿತ ಇನ್ಫೋಸಿಸ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.
ಭಾರತದ ಯಾವುದೇ ವಿಜ್ಞಾನ ಪ್ರಶಸ್ತಿಗಿಂತಲೂ ಹೆಚ್ಚಿನ ಬಹುಮಾನವನ್ನು ಇನ್ಫೋಸಿಸ್ ಪ್ರಶಸ್ತಿ ಹೊಂದಿದೆ. ಈ ವರ್ಷದ ವಿಜೇತರನ್ನು ಗುರುವಾರ ಘೋಷಣೆ ಮಾಡಲಾಗಿದೆ. ಇನ್ಫೋಸಿಸ್ ಸಂಸ್ಥಾಪಕ ಎನ್ ಆರ್ ನಾರಾಯಣ ಮೂರ್ತಿ, ನಂದನ್ ನಿಲೇಕಣಿ, ಕ್ರಿಸ್ ಗೋಪಾಲಕೃಷ್ಣನ್ ಮತ್ತು ಶಿಬುಲಾಲ್ ಅವರು ಭಾಗವಹಿಸಿದ್ದ ಸಮಾರಂಭದಲ್ಲಿ ಪ್ರಶಸ್ತಿ ವಿಜೇತರ ಘೋಷಣೆಯಾಗಿದೆ.
ಬ್ಯಾಕ್ಟೀರಿಯಾದ ಸೆಲ್ ವಾಲ್ ಬೆಳವಣಿಗೆಯನ್ನು ಅರ್ಥಮಾಡಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿರುವ ಮಂಜುಳಾ ರೆಡ್ಡಿ ಅವರು ಜೈವಿಕ ವಿಜ್ಞಾನಕ್ಕಾಗಿನ ಪ್ರಶಸ್ತಿಯನ್ನು ಗೆದ್ದುಕೊಂಡರು. ರಚನೆ ರಹಿತ ದತ್ತಾಂಶಗಳಿಗಾಗಿ ಮಾಹಿತಿ ಹೊರತೆಗೆಯುವ ತಂತ್ರಗಳನ್ನು ಅಭಿವೃದ್ಧಿಪಡಿಸುವಲ್ಲಿ ಮಹತ್ತರ ಸಾಧನೆ ಮಾಡಿದ ಸುನೀತಾ ಅವರು ಎಂಜಿನಿಯರಿಂಗ್ ಮತ್ತು ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಪ್ರಶಸ್ತಿಯನ್ನು ಜಯಿಸಿದ್ದಾರೆ.
ಉಳಿದಂತೆ ಐಐಟಿ ಮಂಡಿಯ ಮನು ದವದೇವನ್, ಐಐಎಸ್ ಬೆಂಗಳೂರಿನ ಜಿ.ಮುಗೇಶ್, ಇಟಿಎಚ್ ಝುರಿಕ್ನ ಸಿದ್ಧಾರ್ಥ ಮಿಶ್ರಾ, ಅಮೆರಿಕಾದ ಜಾನ್ಸ್ ಹೋಪ್ಕಿನ್ಸ್ ಯೂನಿವರ್ಸಿಟಿಯ ಆನಂದ್ ಪಾಂಡಿಯನ್ ಇನ್ಫೋಸಿಸ್ ಪ್ರಶಸ್ತಿ ಪಡೆದ ಇತರರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.