ರಾಂಚಿ: ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ ಅವುಗಳನ್ನು ಝಾರ್ಖಾಂಡ್ ವಿಧಾನಸಭಾ ಚುನಾವಣೆಯ ಪ್ರಣಾಳಿಕೆಯಲ್ಲಿ ಅಳವಡಿಸಿಕೊಳ್ಳುವ ಸಲುವಾಗಿ ಬಿಜೆಪಿ ಆರಂಭಿಸಿದ ‘ಆಕಾಂಕ್ಷಾ ಅಭಿಯಾನ’ ಭಾರೀ ಯಶಸ್ಸನ್ನು ಕಂಡಿದೆ. ಈ ಅಭಿಯಾದ ಅಡಿಯಲ್ಲಿ ಒಟ್ಟು 5.12 ಲಕ್ಷ ಸಲಹೆಗಳನ್ನು ಸ್ವೀಕರಿಸಿದೆ.
ಕೇವಲ ಎರಡು ವಾರಗಳಲ್ಲಿ 5 ಲಕ್ಷಕ್ಕೂ ಅಧಿಕ ಸಲಹೆಗಳನ್ನು ಸ್ವೀಕರಿಸಲಾಗಿದೆ. ಈ ಸಲಹೆಗಳನ್ನು ಮುಂಬರುವ ಝಾರ್ಖಾಂಡ್ ವಿಧಾನಸಭಾ ಚುನಾವಣೆಗಳ ಪ್ರಣಾಳಿಕೆಯಲ್ಲಿ ಸೇರ್ಪಡೆಗೊಳಿಸಲಾಗುತ್ತದೆ ಎಂದು ಝಾರ್ಖಾಂಡ್ ಬಿಜೆಪಿ ಹೇಳಿದೆ.
“ನಿಮ್ಮ ಸಲಹೆಯು ಜಾರ್ಖಂಡ್ ಬಿಜೆಪಿಗೆ ಉತ್ತಮವಾದ ಶಕ್ತಿಯನ್ನು ನೀಡಿದೆ, ಕೇವಲ ಎರಡು ವಾರಗಳಲ್ಲಿ ಅಕಾಂಕ್ಷ ಅಭಿಯಾನದ ಅಡಿಯಲ್ಲಿ 5 ಲಕ್ಷಕ್ಕೂ ಹೆಚ್ಚು ಸಲಹೆಗಳು ಬಂದಿದ್ದು, ರಾಜ್ಯದ ಸರ್ಕಾರದ ಮೇಲಿನ ನಿಮ್ಮ ನಂಬಿಕೆಯನ್ನು ತೋರಿಸುತ್ತದೆ. ಅಭಿವೃದ್ಧಿ ಹೊಂದಿದ ಜಾರ್ಖಂಡ್ ಅನ್ನು ರೂಪಿಸುವುದು ನಮ್ಮ ಪ್ರಯತ್ನ. ನಿಮ್ಮ ಬೆಂಬಲವಿಲ್ಲದೆ ಇದು ಸಾಧ್ಯವಿಲ್ಲ” ಎಂದಿದ್ದಾರೆ.
ಅಕ್ಟೋಬರ್ 17 ರಂದು ಜನರ ನಿರೀಕ್ಷೆಗಳನ್ನು ತಿಳಿದುಕೊಳ್ಳುವ ಮತ್ತು ಅವರ ಸಲಹೆಗಳನ್ನು ತಿಯೊಂದು ಹಂತದಲ್ಲೂ ತೆಗೆದುಕೊಳ್ಳುವ ಮತ್ತು ಪ್ರಣಾಳಿಕೆಯನ್ನು ರಚಿಸುವ ಮೊದಲು ಸಮಾಜದ ಎಲ್ಲಾ ವರ್ಗದವರನ್ನು ಭೇಟಿ ಮಾಡುವ ಪ್ರಯತ್ನವಾಗಿ ಈ ಅಭಿಯಾನವನ್ನು ಪ್ರಾರಂಭಿಸಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.