ನವದೆಹಲಿ: ಕೇಂದ್ರ ಸರಕಾರವು ನೂತನವಾಗಿ ರಚನೆಗೊಂಡ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್ನ ನೂತನ ಭೂಪಟವನ್ನು ಬಿಡುಗಡೆ ಮಾಡಿದೆ.
ನೂತನ ಭೂಪಟದಲ್ಲಿ ಪಾಕಿಸ್ಥಾನ ಆಕ್ರಮಿತ ಕಾಶ್ಮೀರವು ಜಮ್ಮು-ಕಾಶ್ಮೀರದ ಭಾಗವಾಗಿದೆ. ಅಲ್ಲದೆ ಗಿಲ್ಗಿಟ್ ಬಲ್ತಿಸ್ಥಾನ್ ಲಡಾಖ್ ಕೇಂದ್ರಾಡಳಿತ ಪ್ರದೇಶದ ಭಾಗವಾಗಿದೆ. ವಿಭಜನೆಯ ಹಿನ್ನೆಲೆಯಲ್ಲಿ ಕೇಂದ್ರ ಸರಕಾರವು ಶನಿವಾರ ನೂತನವಾದ ಭೂಪಟವನ್ನು ಬಿಡುಗಡೆ ಮಾಡಿತು.
ಅಧಿಸೂಚನೆಯಲ್ಲಿ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯವು ನೂತನವಾದ 2 ಕೇಂದ್ರಾಡಳಿತ ಪ್ರದೇಶಗಳನ್ನು ಒಳಗೊಂಡ ಭಾರತದ ಭೂಪಟವನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪಿಓಕೆ ಮತ್ತು ಗಿಲ್ಗಿಟ್ ಬಲ್ತಿಸ್ಥಾನ್ ಭಾರತದ ಗಡಿಯೊಳಗೆ ಇದೆ.
ಲಡಾಖ್ ಕೇಂದ್ರಾಡಳಿತ ಪ್ರದೇಶವೂ ಕಾರ್ಗಿಲ್ ಮತ್ತು ಲೇಹ್ ಎರಡು ಜಿಲ್ಲೆಗಳನ್ನು ಹೊಂದಿದೆ. ಉಳಿದ ಭಾಗಗಳಾದ ಕತುವ, ಜಮ್ಮು, ಉಧಂಪುರ್, ಮುಜಾಫರಾಬಾದ್, ಗಿಲ್ಗಿಟ್, ಗಿಲ್ಗಿಟ್ ವಝಾರತ್, ಚಿಲ್ಹಾಸ್ ಮತ್ತು ಬುಡಕಟ್ಟು ಭೂಪ್ರದೇಶ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.