ಸಿಡ್ನಿ: ಭಾರತೀಯ ಸಂಜಾತ, ಸಿಡ್ನಿಯ ನ್ಯೂ ಸೌತ್ ವೇಲ್ಸ್ ವಿಶ್ವವಿದ್ಯಾಲಯದ (ಯುಎನ್ಎಸ್ಡಬ್ಲ್ಯು) ಡಾ. ನೀರಜ್ ಶರ್ಮಾ ಅವರನ್ನು ಮುಂದಿನ ಪೀಳಿಗೆಯ ಲಿಥಿಯಂ-ಐಯಾನ್ ಬ್ಯಾಟರಿಗಳ ವಸ್ತುಗಳನ್ನು ಅಧ್ಯಯನ ಮಾಡಲು ನ್ಯೂಟ್ರಾನ್ ಮತ್ತು ಎಕ್ಸರೆ ಸ್ಕ್ಯಾಟರಿಂಗ್ ವಿಧಾನಗಳ ಬಳಸಿದ ಜಾಗತಿಕ ನಾಯಕರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಇವರಿಗೆ “ಅರ್ಲಿ ಕರಿಯರ್ ರಿಸರ್ಚರ್ ಆಫ್ ದಿ ಇಯರ್ (ಭೌತ ವಿಜ್ಞಾನ) ‘ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
NSW ಪ್ರೀಮಿಯರ್ ಗ್ಲಾಡಿಸ್ ಬೆರೆಜಿಕ್ಲಿಯನ್ ಅವರು 35 ವರ್ಷದ UNSWನ ಸ್ಕೂಲ್ ಆಫ್ ಕೆಮಿಸ್ಟ್ರಿಯ ಡಾ. ಶರ್ಮಾ ಅವರನ್ನು ಸಿಡ್ನಿಯ ಸರ್ಕಾರಿ ಭವನದಲ್ಲಿ ಗೌರವಿಸಿದರು ಎಂದು ವಿಶ್ವವಿದ್ಯಾಲಯವು ಶುಕ್ರವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಎಲೆಕ್ಟ್ರಾನಿಕ್ ಸಾಧನಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಗ್ರಿಡ್ನಲ್ಲಿ ಕಂಡುಬರುವ ಲಿಥಿಯಂ-ಐಯಾನ್ ಬ್ಯಾಟರಿಗಳು ಮತ್ತು ಪರಿಸರಕ್ಕೆ ಕನಿಷ್ಠ ಹಾನಿಯನ್ನುಂಟು ಮಾಡುವ ಮುಂದಿನ ಪೀಳಿಗೆಯ ಬ್ಯಾಟರಿ ವ್ಯವಸ್ಥೆಗಳಾದ ಸೋಡಿಯಂ-ಅಯಾನ್ ಬ್ಯಾಟರಿಗಳ ಅಧ್ಯಯನಕ್ಕಾಗಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.
“ಪರಿಸರಕ್ಕೆ ಕಡಿಮೆ ಹಾನಿಯನ್ನುಂಟು ಮಾಡುವ ಮುಂದಿನ ಪೀಳಿಗೆಯ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಉತ್ತಮ ಕಾರ್ಯಕ್ಷಮತೆ ಬೇಕು” ಎಂದು ಡಾ. ಶರ್ಮಾ ಈ ವೇಳೆ ಅಭಿಪ್ರಾಯಿಸಿದ್ದಾರೆ.
“ನನ್ನ ಕೆಲಸವು ಎಲೆಕ್ಟ್ರಾನಿಕ್ ಸಾಧನಗಳು, ಎಲೆಕ್ಟ್ರಿಕ್ ವಾಹನಗಳು ಮತ್ತು ಗ್ರಿಡ್ನಲ್ಲಿನ ಲಿಥಿಯಂ-ಐಯಾನ್ ಬ್ಯಾಟರಿಗಳನ್ನು, ಸೋಡಿಯಂ ಐಯಾನ್ ಬ್ಯಾಟರಿಯಂತಹ ಮುಂದಿನ ತಲೆಮಾರಿನ ಬ್ಯಾಟರಿ ವ್ಯವಸ್ಥೆಗಳನ್ನು ಪರಿಶೋಧಿಸುತ್ತದೆ. ಸೋಡಿಯಂ-ಅಯಾನ್ ಬ್ಯಾಟರಿಗಳ ಅಧ್ಯಯನವು ವಿಶೇಷವಾಗಿ ಆಕರ್ಷಕವಾಗಿದೆ ಮತ್ತು ನಾವು ಈ ವ್ಯವಸ್ಥೆಗಳಿಗೆ ಹೊಸ ಎಲೆಕ್ಟ್ರೊಡಸ್ಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ “ಎಂದು ಅವರು ವಿವರಿಸಿದ್ದಾರೆ.
ಅವರ ಸಂಶೋಧನಾ ಗುಂಪು ಅಂತರ್ಗತವಾಗಿ ಸುರಕ್ಷಿತ ಘನ-ಸ್ಥಿತಿಯ ಬ್ಯಾಟರಿಗಳು, ಶಕ್ತಿಶಾಲಿ ಲಿಥಿಯಂ-ಸಲ್ಫರ್ ಬ್ಯಾಟರಿಗಳು, ಡ್ಯುಯಲ್ ಫಂಕ್ಷನ್ ಸೌರ ಬ್ಯಾಟರಿಗಳು ಮತ್ತು ಮರುಬಳಕೆ ಮಾಡುವ ವಿಧಾನಗಳನ್ನು ಸಹ ಅನ್ವೇಷಿಸುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.