ನವದೆಹಲಿ: ಝಾರ್ಖಾಂಡ್ ವಿಧಾನಸಭಾ ಚುನಾವಣೆಗೆ ಇಂದು ಚುನಾವಣಾ ಆಯೋಗ ದಿನಾಂಕವನ್ನು ಘೋಷಣೆ ಮಾಡಿದೆ. ಐದು ಹಂತದಲ್ಲಿ ಚುನಾವಣೆ ನಡೆಯಲಿದೆ. ನವೆಂಬರ್ 30ರಿಂದ ಚುನಾವಣೆ ಆರಂಭಗೊಳ್ಳಲಿದೆ.
ಪ್ರಧಾನಿ ನರೇಂದ್ರ ಮೋದಿಯವರು ಎರಡನೇ ಬಾರಿಗೆ ಅಧಿಕಾರದ ಗದ್ದುಗೆಯನ್ನು ಏರಿದ ಬಳಿಕ ನಡೆಯುತ್ತಿರುವ ಮೂರನೇ ವಿಧಾನಸಭಾ ಚುನಾವಣೆ ಇದಾಗಿದೆ. ಈಗಾಗಲೇ ಮಹಾರಾಷ್ಟ್ರ ಮತ್ತು ಹರಿಯಾಣದ ಚುನಾವಣೆಗಳು ಮುಕ್ತಾಯಗೊಂಡಿವೆ.
ಮೊದಲ ಹಂತದ ಚುನಾವಣೆ ನವೆಂಬರ್ 30 ರಂದು ಜರುಗಿದರೆ, ಎರಡನೇ ಹಂತ ಡಿಸೆಂಬರ್ 7 ರಂದು ಜರುಗಲಿದೆ. ಮೂರನೇ ಹಂತ ಡಿ.12 ರಂದು ನಡೆಯಲಿದೆ, ನಾಲ್ಕನೇ ಹಂತ ಡಿ.16 ರಂದು ಜರುಗಲಿದೆ. ಐದನೇ ಹಂತ ಡಿ.20 ರಂದು ಜರುಗಲಿದೆ.
ಮತ ಎಣಿಕೆ ಕಾರ್ಯ ಡಿ. 23 ರಂದು ಜರುಗಲಿದೆ.
ಝಾರ್ಖಾಂಡಿನಲ್ಲಿ ಒಟ್ಟು 81 ವಿಧಾನಸಭಾ ಚುನಾವಣೆಗಳಿವೆ. ಪ್ರಸ್ತುತ ಅಲ್ಲಿ ರಘುಬರ್ ದಾಸ್ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ 14 ಲೋಕಸಭಾ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.