ನವದೆಹಲಿ: ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಗುರುವಾರ ದೆಹಲಿಯಲ್ಲಿ ‘ಏಕತಾ ಓಟ’ಕ್ಕೆ ಚಾಲನೆಯನ್ನು ನೀಡಿದರು. ದೇಶದ ಮೊದಲ ಗೃಹಸಚಿವ, ಏಕತಾ ರೂವಾರಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ಇಂದು ರಾಷ್ಟ್ರೀಯ ಏಕತಾ ದಿನವನ್ನು ಆಚರಣೆ ಮಾಡಲಾಗುತ್ತಿದೆ. ಈ ಹಿನ್ನಲೆಯಲ್ಲಿ ‘ಏಕತಾ ಓಟ’ವನ್ನು ಆಯೋಜನೆಗೊಳಿಸಲಾಗಿದೆ.
ದೆಹಲಿಯ ಧ್ಯಾನ್ ಚಂದ್ ನ್ಯಾಷನಲ್ ಸ್ಟೇಡಿಯಂನಲ್ಲಿ ‘ಏಕತಾ ಓಟ’ಕ್ಕೆ ಚಾಲನೆಯನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಶಾ ಅವರು, “ಸ್ವಾತಂತ್ರ್ಯದ ಬಳಿಕ ಭಾರತವನ್ನು 550 ರಾಜ್ಯಗಳಾಗಿ ಪ್ರತ್ಯೇಕಿಸುವ ಕೃತ್ಯವನ್ನು ಬ್ರಿಟಿಷರು ಮಾಡಿದ್ದರು. ಭಾರತಕ್ಕೆ ಸ್ವಾತಂತ್ರ್ಯವೇನೋ ಸಿಕ್ಕಿದೆ, ಆದರೆ ಅದು ಛಿದ್ರವಾಗಿ ಹೋಗುವುದು ಖಚಿತ ಎಂದೇ ಜಗತ್ತು ನಂಬಿತ್ತು. ಆದರೆ ಸರ್ದಾರ್ ವಲ್ಲಭಭಾಯ್ ಪಟೇಲರು ಒಂದೊಂದೇ ರಾಜ್ಯವನ್ನು ಜೋಡಿಸುವ ಕಾರ್ಯವನ್ನು ಮಾಡಿದರು” ಎಂದಿದ್ದಾರೆ.
“ಸ್ವಾತಂತ್ರ್ಯ ಬಂದು 70 ವರ್ಷಗಳಾದರೂ ಯಾರೊಬ್ಬರು 370ನೇ ವಿಧಿಯ ಬಗ್ಗೆ ಯೋಚಿಸುವುದು ಕೂಡ ಸೂಕ್ತ ಎಂದು ಅಂದುಕೊಳ್ಳಲಿಲ್ಲ. 2019ರಲ್ಲಿ ದೇಶದ ಜನತೆ ಮತ್ತೊಮ್ಮೆ ಮೋದಿಯನ್ನು ದೇಶದ ಪ್ರಧಾನಿಯನ್ನಾಗಿಸಿದರು ಮತ್ತು ಆಗಸ್ಟ್ 5 ರಂದು ಸಂಸತ್ತು 370 ಮತ್ತು 35 ಎ ವಿಧಿಯನ್ನು ರದ್ದುಗೊಳಿಸಿ ಸರ್ದಾರ್ ಪಟೇಲರ ಅಪೂರ್ಣ ಕನಸನ್ನು ನನಸಾಗಿಸಿತು” ಎಂದಿದ್ದಾರೆ.
ಏಕತಾ ಓಟಕ್ಕೆ ಚಾಲನೆ ನೀಡುವುದಕ್ಕೂ ಮುಂಚಿತವಾಗಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್, ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರುರ್ದಾರ್ ವಲ್ಲಭಭಾಯ್ ಪಟೇಲ್ ಅವರಿಗೆ ಪುಷ್ಪ ನಮನ ಸಲ್ಲಿಸಿದರು.
ಪಟೇಲ್ ಅವರ 144 ನೇ ಜನ್ಮ ದಿನಾಚರಣೆಯಂದು ಇಂದು ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.
ಈ ವಿಶೇಷ ಸಂದರ್ಭದಲ್ಲಿ, ‘ಏಕತಾ ಓಟ’ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರಿಗೆ ಅನುಕೂಲವಾಗುವಂತೆ ದೆಹಲಿ ಮೆಟ್ರೋ ಸೇವೆಗಳು ಇಂದು ಮುಂಜಾನೆ 4 ಗಂಟೆಗೆ ಪ್ರಾರಂಭವಾದವು.
ಗುಜರಾತ್ನ ಕೆವಾಡಿಯಾದಲ್ಲಿನ ಏಕತಾ ಪ್ರತಿಮೆಗೆ ಪ್ರಧಾನಿ ಮೋದಿ ಗೌರವ ಸಲ್ಲಿಸಿದ್ದಾರೆ.
2014 ರಿಂದ, ಪ್ರತಿ ವರ್ಷ ಅಕ್ಟೋಬರ್ 31 ಅನ್ನು ರಾಷ್ಟ್ರೀಯ ಏಕತಾ ದಿನವಾಗಿ ಆಚರಿಸಲಾಗುತ್ತಿದೆ. ಏಕತಾ ಓಟವನ್ನೂ ಆಯೋಜನೆಗೊಳಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.