ನವದೆಹಲಿ: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)ಯು ಬುಧವಾರ ತನ್ನ ಏವಿಯೇಷನ್ ಸೆಕ್ಯುರಿಟಿ ಗ್ರೂಪ್ (ASG) ಹೈದರಾಬಾದ್ ವಿಮಾನನಿಲ್ದಾಣದ ಸಿಐಎಸ್ಎಫ್ ಘಟಕಕ್ಕೆ ಹೊಸ ಮತ್ತು ಹೆಚ್ಚು ತರಬೇತಿ ಪಡೆದ ಕೆ 9 ಸದಸ್ಯನನ್ನು ಸ್ವಾಗತಿಸಿದೆ.
“ಯೋಧ, ಮನುಷ್ಯನ ಉತ್ತಮ ಸ್ನೇಹಿತ, ಬಲಶಾಲಿ ಮತ್ತು ಒಡನಾಡಿ ಶ್ವಾನ ರೂಬಿ ಅನ್ನು ತಂಡಕ್ಕೆ ಸೇರ್ಪಡೆಗೊಳಿಸಿದೆ. ಕೆ9 ತಂಡದ ಅತ್ಯಂತ ಹೊಸ ಸದಸ್ಯ ಇದಾಗಿದ್ದು, ಹೆಚ್ಚು ತರಬೇತಿ ಪಡೆದ ಸದಸ್ಯನಾಗಿದೆ. ಎಎಸ್ಜಿ ಹೈದರಾಬಾದ್ ವಿಮಾನ ನಿಲ್ದಾಣದ ಸಿಐಎಸ್ಎಫ್ ಘಟಕಕ್ಕೆ ಇದು ಸೇರ್ಪಡೆಗೊಂಡಿದೆ” ಎಂದು ಸಿಐಎಸ್ಎಫ್ ಪಡೆ ಟ್ವೀಟ್ ಮಾಡಿದೆ.
ರೂಬಿ ಅನ್ನು ಸ್ವಾಗತಿಸುವ ಹಲವು ಪೋಟೋಗಳನ್ನು ಕೂಡ ಪಡೆ ಹಂಚಿಕೊಂಡಿದೆ. ” ಕೆ 9 ಕುಟುಂಬ ASG ಹೈದರಾಬಾದ್ಗೆ ಸ್ವಾಗತ ರೂಬಿ ” ಎಂದು ಒಕ್ಕಣೆಯನ್ನು ನೀಡಿದೆ.
ವೆಬ್ಸೈಟ್ನ ಮಾಹಿತಿಯ ಪ್ರಕಾರ, ಸಿಐಎಸ್ಎಫ್ 1969 ರಲ್ಲಿ ಅಸ್ತಿತ್ವಕ್ಕೆ ಬಂದಿತು, ಮೂರು ಬೆಟಾಲಿಯನ್ಗಳನ್ನು ಇದು ಹೊಂದಿದ್ದು, ಸಾರ್ವಜನಿಕ ವಲಯದ ಉದ್ಯಮಗಳಿಗೆ (ಪಿಎಸ್ಯು) ಸಮಗ್ರ ಭದ್ರತಾ ರಕ್ಷಣೆಯನ್ನು ಒದಗಿಸಿದೆ.
ಸಿಐಎಸ್ಎಫ್ ಪ್ರಸ್ತುತ ಪರಮಾಣು ಸ್ಥಾಪನೆಗಳು, ಬಾಹ್ಯಾಕಾಶ ಸಂಸ್ಥೆಗಳು, ವಿಮಾನ ನಿಲ್ದಾಣಗಳು, ಬಂದರುಗಳು, ವಿದ್ಯುತ್ ಸ್ಥಾವರಗಳು, ಸೂಕ್ಷ್ಮ ಸರ್ಕಾರಿ ಕಟ್ಟಡಗಳು ಮತ್ತು ಪಾರಂಪರಿಕ ಸ್ಮಾರಕಗಳಿಗೆ ಭದ್ರತಾ ರಕ್ಷಣೆ ನೀಡುತ್ತಿದೆ. ದೆಹಲಿ ಮೆಟ್ರೋ ರೈಲು ನಿಗಮ, ವಿಐಪಿ ಭದ್ರತೆ, ವಿಪತ್ತು ನಿರ್ವಹಣೆ ಮತ್ತು ಹೈಟಿಯಲ್ಲಿ ಯುಎನ್ನ ರೂಪಿತ ಪೊಲೀಸ್ ಘಟಕವನ್ನು (ಎಫ್ಪಿಯು) ಸ್ಥಾಪಿಸುವುದು ಸಿಐಎಸ್ಎಫ್ಗೆ ಇತ್ತೀಚೆಗೆ ವಹಿಸಲಾಗಿರುವ ಪ್ರಮುಖ ಜವಾಬ್ದಾರಿಗಳಾಗಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.