ನವದೆಹಲಿ: ಭಾರತೀಯ ಸೇನೆಯು 2019ರ ಡಿಸೆಂಬರ್ ವೇಳೆಗೆ ಅಮೆರಿಕಾ ನಿರ್ಮಿತ ಘನ-ಕ್ಯಾಲಿಬರ್ ಸಿಗ್ ಸೌರ್ ಆಕ್ರಮಣಕಾರಿ ರೈಫಲ್ಗಳನ್ನು ಹೊಂದಲಿದೆ. ಈ ರೈಫಲ್ಗಳ ಮೊದಲ ಬ್ಯಾಚ್ ಅನ್ನು ಈ ಡಿಸೆಂಬರ್ ವೇಳೆಗೆ ಅಮೆರಿಕಾವು ಭಾರತಕ್ಕೆ ಹಸ್ತಾಂತರಿಸಲಿದೆ. ಯುಎಸ್ ಶಸ್ತ್ರಾಸ್ತ್ರ ದಿಗ್ಗಜ ಸಿಗ್ ಸೌರ್ ನಿರ್ಮಿತ 72,400 ರೈಫಲ್ಗಳನ್ನು ರೂ.700 ಕೋಟಿಗೆ ಖರೀದಿ ಮಾಡಲು ರಕ್ಷಣಾ ಸಚಿವಾಲಯವು ಫೆಬ್ರವರಿಯಲ್ಲಿ ಸಹಿ ಹಾಕಿತ್ತು.
ಈ ಆಕ್ರಮಣಕಾರಿ ರೈಫಲ್ಗಳು ಸೇನೆಯ ‘ಶೂಟ್ ಟು ಕಿಲ್’ ಕಾರ್ಯಾಚರಣೆಗೆ ಹೆಚ್ಚಿನ ಬಲವನ್ನು ತಂದುಕೊಡಲಿದೆ. ಈ ಶಸ್ತ್ರಾಸ್ತ್ರಗಳು ದಂಗೆ ಪೀಡಿತ ಪ್ರದೇಶಗಳಲ್ಲಿ ಸೈನಿಕರಿಗೆ ಮೇಲುಗೈಯನ್ನು ನೀಡಬಲ್ಲದು. ಪ್ರಸ್ತುತ ನಮ್ಮ ಸೈನಿಕರು ಐಎನ್ಎಸ್ಎಎಸ್ ರೈಫಲ್ಗಳ ಮೇಲೆ ಅವಲಂಬಿತರಾಗಿದ್ದಾರೆ. ಅಲ್ಲದೇ, ರಷ್ಯಾ ಮೂಲದ ಎಕೆ -203 ರೈಫಲ್ಗಳ ಸ್ಥಳೀಯ ಸಾಮೂಹಿಕ ಉತ್ಪಾದನೆಗಾಗಿ ಇನ್ನಷ್ಟು ಸಮಯಗಳ ಕಾಲ ಸೇನೆ ಕಾಯಬೇಕಾಗಿದೆ.
ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಕಳೆದ ವಾರ, ವರ್ಷದ ಅಂತ್ಯದ ವೇಳೆಗೆ ಸಿಗ್ ಸೌರ್ ರೈಫಲ್ಗಳ ಮೊದಲ ಬ್ಯಾಚ್ ನಮ್ಮ ಕೈಗೆ ಸಿಕ್ಕಲಿದೆ, ಇದನ್ನು ದೇಶದಲ್ಲಿ ಜೋಡಿಸಿದ ನಂತರ ಸೈನಿಕರಿಗೆ ಒದಗಿಸಲಾಗುವುದು ಎಂದು ಹೇಳಿದ್ದಾರೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್ಡಿಒ) ವಿನ್ಯಾಸಗೊಳಿಸಿದ ಮತ್ತು ಸರ್ಕಾರಿ ಸ್ವಾಮ್ಯದ ಆರ್ಡ್ನೆನ್ಸ್ ಫ್ಯಾಕ್ಟರಿ ಬೋರ್ಡ್ (ಒಎಫ್ಬಿ) ನಿರ್ಮಿಸಿದ ಐಎನ್ಎಸ್ಎಎಸ್ ಅನ್ನು 1994 ರಲ್ಲಿ ಸೈನ್ಯಕ್ಕೆ ಸೇರಿಸಲಾಯಿತು. ಆದರೆ ಸಶಸ್ತ್ರ ಪಡೆಗಳು ಈ ಶಸ್ತ್ರಾಸ್ತ್ರವನ್ನು ತೂಕ ಮತ್ತು ದೃಷ್ಟಿ ವ್ಯವಸ್ಥೆ ಆಯಾಮದಲ್ಲಿ ಸಮರ್ಥವಾದುದಲ್ಲ ಎಂದು ಹೇಳಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.