ನವದೆಹಲಿ: ಭಾರತೀಯ ರೈಲ್ವೆಯು, ಅಧಿಕೃತ ರೈಲ್ವೆ ಟಿಕೆಟಿಂಗ್ ಏಜೆಂಟರ ಮೂಲಕ ಕಾಯ್ದಿರಿಸಿದ ಟಿಕೆಟ್ಗಳಿಗಾಗಿ ಹೊಸ ಒಟಿಪಿ ಆಧಾರಿತ ಮರುಪಾವತಿ ವ್ಯವಸ್ಥೆಯನ್ನು ಪರಿಚಯಿಸಿದೆ, ಹೊಸ ವ್ಯವಸ್ಥೆಯನ್ನು ಭಾರತೀಯ ರೈಲ್ವೆ ಪಿಎಸ್ಯು, ಇಂಡಿಯನ್ ರೈಲ್ವೆ ಕ್ಯಾಟರಿಂಗ್ & ಟೂರಿಸಂ ಕಾರ್ಪೋರೇಶನ್ ಲಿಮಿಟೆಡ್ (ಐಆರ್ಸಿಟಿಸಿ) ಜಾರಿಗೆ ತರಲಿದೆ ಎಂದು ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಹೊಸ ಪ್ರಕ್ರಿಯೆಯು, ರದ್ದುಗೊಂಡ ಕಾಯ್ದಿರಿಸಿದ ಇ-ಟಿಕೆಟ್ಗಳಿಗಾಗಿ ಪಾರದರ್ಶಕ ಮತ್ತು ಗ್ರಾಹಕ-ಸ್ನೇಹಿ ಮರುಪಾವತಿ ವ್ಯವಸ್ಥೆಯನ್ನು ತರುವ ಉದ್ದೇಶವನ್ನು ಇದು ಹೊಂದಿದೆ.
ಪ್ರಯಾಣಿಕರು ಪೂರ್ಣಪ್ರಮಾಣದ ವೇಟಿಂಗ್ ಲಿಸ್ಟ್ನ ಟಿಕೆಟ್ ಮುಂಗಡ ಕಾಯ್ದಿರಿಸಿದರೆ ಅಥವಾ ಪ್ರಯಾಣಿಕರೇ ಟಿಕೆಟ್ ರದ್ದುಗೊಳಿಸಿದರೆ ಅವರ ಮೊಬೈಲ್ಗೆ ಒಂದು OTP ರವಾನೆಯಾಗುತ್ತದೆ. ಅದನ್ನು ಯಾವ ಏಜೆಂಟ್ ಟಿಕೆಟ್ ಬುಕ್ ಮಾಡಿರುತ್ತಾರೋ ಅವರಿಗೆ ಕೊಟ್ಟರೆ ಅದನ್ನು ಅವರು ದಾಖಲಿಸುತ್ತಾರೆ. ಆಗ ಟಿಕೆಟ್ ಹಣವನ್ನು ಆ ಪ್ರಯಾಣಿಕರ ಮೊಬೈಲ್ಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗೆ ಕಳುಹಿಸಲಾಗುತ್ತದೆ.
ಪ್ರಯಾಣಿಕರ ನೋಂದಾಯಿತ ಮೊಬೈಲ್ ಸಂಖ್ಯೆಯಲ್ಲಿ (ಬುಕಿಂಗ್ ಸಮಯದಲ್ಲಿ ಒದಗಿಸಲಾದ) ಒಟಿಪಿ (ಒನ್ ಟೈಮ್ ಪಾಸ್ವರ್ಡ್) ಅನ್ನು ಎಸ್ಎಂಎಸ್ ಆಗಿ ಕಳುಹಿಸಿಕೊಡಲಾಗುತ್ತದೆ. ಮರುಪಾವತಿ ಮೊತ್ತವನ್ನು ಪಡೆಯಲು ಗ್ರಾಹಕರು ಟಿಕೆಟ್ ಕಾಯ್ದಿರಿಸಿದ ಏಜೆಂಟರೊಂದಿಗೆ ಒಟಿಪಿಯನ್ನು ಹಂಚಿಕೊಳ್ಳ ಬೇಕಾಗುತ್ತದೆ.
ಈ ಬಳಕೆದಾರ ಸ್ನೇಹಿ ಸೌಲಭ್ಯದ ಮೂಲಕ, ರದ್ದಾದ ಟಿಕೆಟ್ ಅಥವಾ ಸಂಪೂರ್ಣ ವೇಟ್ಲಿಸ್ಟ್ ಮಾಡಿ ಡ್ರಾಪ್ ಆದ ಟಿಕೆಟ್ಗಳ ಮೇಲೆ ಏಜೆಂಟರು ತಮ್ಮ ಪರವಾಗಿ ಸ್ವೀಕರಿಸಿದ ನಿಖರವಾದ ಮರುಪಾವತಿ ಮೊತ್ತದ ಬಗ್ಗೆ ಪ್ರಯಾಣಿಕರಿಗೆ ತಿಳಿಯುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.