ನವದೆಹಲಿ: ಯುರೋಪಿಯನ್ ಯೂನಿಯನ್ (ಇಯು) ಸದಸ್ಯರ ನಿಯೋಗ ಮಂಗಳವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಿ ರಾಜ್ಯದ ಪರಿಸ್ಥಿತಿಯನ್ನು ಅವಲೋಕನ ಮಾಡಿದೆ. ಆಗಸ್ಟ್ 5 ರಂದು 370 ನೇ ವಿಧಿಯನ್ನು ರದ್ದುಪಡಿಸಿದ ನಂತರ ಕಾಶ್ಮೀರಕ್ಕೆ ಭೇಟಿ ನೀಡಿದ ಮೊದಲ ವಿದೇಶಿ ನಿಯೋಗ ಇದಾಗಿದೆ. ಕಣಿವೆಯಲ್ಲಿ ಹಿಂಸಾಚಾರ ನಡೆಯುತ್ತಿದೆಯೇ, ಮಾನವ ಹಕ್ಕುಗಳ ಉಲ್ಲಂಘನೆ ನಡೆಯುತ್ತಿದೆಯೇ ಎಂಬಿತ್ಯಾದಿ ಅಂಶಗಳನ್ನು ಈ ನಿಯೋಗ ಪರಿಶೀಲನೆ ನಡೆಸಲಿದೆ.
ಮಂಗಳವಾರ ಮಧ್ಯಾಹ್ನ 23 ಯುರೋಪಿಯನ್ ಯೂನಿಯನ್ ಸಂಸತ್ತುಗಳ ಸದಸ್ಯರು ಶ್ರೀನಗರಕ್ಕೆ ಬಂದಿಳಿದಿವೆ. ಪಂಚತಾರಾ ಹೋಟೆಲ್ನಲ್ಲಿ ವಿರಮಿಸಿದ ಬಳಿಕ ಈ ತಂಡ ಬಾದಾಮಿ ಬಾಗ್ನಲ್ಲಿರುವ ಸೇನೆಯ 15 ಕಾರ್ಪ್ಸ್ ಕೇಂದ್ರ ಕಚೇರಿಗೆ ತೆರಳಿದೆ. ಅಲ್ಲಿ ಉನ್ನತ ಸೇನಾ ಕಮಾಂಡರ್ಗಳು ಕಾಶ್ಮೀರದ ಪರಿಸ್ಥಿತಿಯ ಬಗ್ಗೆ ಇವರಿಗೆ ವಿವರಿಸಿದರು.
ನಿಯೋಗವು ಕಣಿವೆಯ ಜನತಾದಳ-ಯುನೈಟೆಡ್ ಮತ್ತು ಭಾರತೀಯ ಜನತಾ ಪಕ್ಷದ ಸದಸ್ಯರುಗಳನ್ನು, ಪಂಚ್ ಮತ್ತು ಸರಪಂಚ್ ಮುಂತಾದ ಕಣಿವೆಯ ಪ್ರತಿನಿಧಿಗಳನ್ನು ಮತ್ತು ಹೊಸದಾಗಿ ಆಯ್ಕೆಯಾದ ಕೆಲವು ಬ್ಲಾಕ್ ಅಭಿವೃದ್ಧಿ ಆಯೋಗದ ಸದಸ್ಯರನ್ನು ಭೇಟಿಯಾಗಿದೆ ಎಂದು ವರದಿಯಾಗಿದೆ.
ದಾಲ್ ಸರೋವರದಲ್ಲಿ ಈ ನಿಯೋಗ ಶಿಖಾರ ರೈಡ್ ಅನ್ನೂ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರನ್ನು ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾದ ಬಳಿಕ ನಿಯೋಗ ಕಾಶ್ಮೀರಕ್ಕೆ ತೆರಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.