ರಿಯಾದ್: ಭಾರತವು ಮಂಗಳವಾರ ಸೌದಿ ಅರೇಬಿಯಾದೊಂದಿಗೆ ರುಪೇ ಕಾರ್ಡ್ ಒಪ್ಪಂದಕ್ಕೆ ಸಹಿ ಹಾಕಿದೆ. ಹೀಗಾಗಿ ಇನ್ನು ಮುಂದೆ ಸೌದಿ ಅರೇಬಿಯಾದಲ್ಲೂ ರುಪೇ ಕಾರ್ಡ್ ಕಾರ್ಯಾರಂಭ ಮಾಡಲಿದೆ. ಭಾರತದ ಡಿಜಿಟಲ್ ಪಾವತಿ ವ್ಯವಸ್ಥೆಯನ್ನು ಪ್ರಾರಂಭಿಸಿದ ಪಶ್ಚಿಮ ಏಷ್ಯಾದ ಮೂರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಸೌದಿ ಪಾತ್ರವಾಗಿದೆ. ಇದು ಆ ದೇಶದಲ್ಲಿ ಇರುವ 2.6 ಮಿಲಿಯನ್ ಭಾರತೀಯರಿಗೆ ಮಾತ್ರವಲ್ಲ ಹಜ್ ಮತ್ತು ಉಮ್ರಾ ಯಾತ್ರಿಕರಿಗೂ ಪ್ರಯೋಜನಕಾರಿಯಾಗಿದೆ.
ಎಟಿಎಂಗಳು, ಪಿಒಎಸ್ ಸಾಧನಗಳು ಮತ್ತು ಇ-ಕಾಮರ್ಸ್ ವೆಬ್ಸೈಟ್ಗಳಲ್ಲಿ ಸ್ವೀಕೃತಗೊಂಡಿರುವ ರುಪೇ ಕಾರ್ಡ್ ಭಾರತದ ದೇಶೀಯ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಪಾವತಿ ಜಾಲವಾಗಿದೆ. ದೇಶೀಯ, ಮುಕ್ತ ಮತ್ತು ಬಹುಪಕ್ಷೀಯ ಪಾವತಿ ವ್ಯವಸ್ಥೆಯನ್ನು ಹೊಂದುವ ಭಾರತೀಯ ರಿಸರ್ವ್ ಬ್ಯಾಂಕ್ನ ದೂರದೃಷ್ಟಿಯನ್ನು ಈಡೇರಿಸಲು ಇದನ್ನು 2012 ರಲ್ಲಿ ಪ್ರಾರಂಭಿಸಲಾಯಿತು.
ಭಾರತ ಈಗಾಗಲೇ ಯುಎಇ, ಬಹ್ರೇನ್, ಸಿಂಗಾಪುರ್ ಮತ್ತು ಭೂತಾನ್ನಲ್ಲಿ ರುಪೇ ಕಾರ್ಡ್ ಅನ್ನು ಬಿಡುಗಡೆ ಮಾಡಿದೆ.
ಪ್ರಧಾನಿ ನರೇಂದ್ರ ಮೋದಿಯವರ ಭೇಟಿಯ ಸಮಯದಲ್ಲಿ, ಸೌದಿ ಅರೇಬಿಯಾದಲ್ಲಿ ರುಪೇ ಕಾರ್ಡ್ಗಳನ್ನು ಪ್ರಾರಂಭಿಸುವ ಒಪ್ಪಂದಕ್ಕೆ ಸಹಿ ಹಾಕಲಾಯಿತು ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ದೇಶದ ಅತಿದೊಡ್ಡ ವಲಸಿಗ ಸಮುದಾಯವನ್ನು ಹೊಂದಿರುವ ಸೌದಿ ಅರೇಬಿಯಾದಲ್ಲಿ 2.6 ದಶಲಕ್ಷಕ್ಕೂ ಹೆಚ್ಚು ಭಾರತೀಯರು ಕೆಲಸ ಮಾಡುತ್ತಿದ್ದಾರೆ. ಭಾರತದಿಂದ ಸುಮಾರು ಎರಡು ಲಕ್ಷ ಹಜ್ ಯಾತ್ರಿಕರು ಮತ್ತು ಮೂರು ಲಕ್ಷಕ್ಕೂ ಹೆಚ್ಚು ಉಮ್ರಾ ಯಾತ್ರಾರ್ಥಿಗಳು ಪ್ರತಿವರ್ಷ ಸೌದಿ ಅರೇಬಿಯಾಕ್ಕೆ ಭೇಟಿ ನೀಡುತ್ತಾರೆ. ರುಪೇ ಕಾರ್ಡ್ ಅನ್ನು ಸ್ವೀಕರಿಸುವುದರಿಂದ ಅವರಿಗೆ ಅಗ್ಗದ ದರದಲ್ಲಿ ವಹಿವಾಟು ನಡೆಸಲು ಅಲ್ಲಿ ಅವಕಾಶ ಸಿಗುತ್ತದೆ.
ಇಂದು, ಭಾರತದಲ್ಲಿ ಸುಮಾರು 500 ಮಿಲಿಯನ್ ರುಪೇ ಕಾರ್ಡ್ಗಳು ಚಲಾವಣೆಯಲ್ಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.