ಅಯೋಧ್ಯಾ: ಶ್ರೀರಾಮನ ಜನ್ಮಸ್ಥಳ ಉತ್ತರಪ್ರದೇಶದ ಅಯೋಧ್ಯೆಯಲ್ಲಿ ದೀಪಾವಳಿ ಹಿನ್ನೆಲೆಯಲ್ಲಿ ಶನಿವಾರ ದೀಪೋತ್ಸವವನ್ನು ಆಯೋಜಿಸಲಾಗಿತ್ತು. ಸುಮಾರು 6 ಲಕ್ಷ ದೀಪಗಳನ್ನು ಉರಿಸುವ ಮೂಲಕ ವಿಶ್ವ ದಾಖಲೆ ನಿರ್ಮಾಣ ಮಾಡಲಾಗಿತ್ತು. ಇದೀಗ ದೀಪೋತ್ಸವ ಮುಗಿದ ಬಳಿಕ ಅಲ್ಲಿ ಬೃಹತ್ ಸ್ವಚ್ಛತಾ ಕಾರ್ಯವನ್ನು ಆಯೋಜನೆಗೊಳಿಸಲಾಗುತ್ತಿದೆ.
‘ರಾಮ್ ಕಿ ಪೈಡಿ’ ಎಂಬಲ್ಲಿ ಸ್ವಚ್ಛತಾ ಕಾರ್ಯವನ್ನು ಅಲ್ಲಿ ನಡೆಸಲಾಗುತ್ತಿದ್ದು ನೂರಾರು ಮಹಾನಗರ ಪಾಲಿಕೆ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ದೀಪೋತ್ಸವದ ಸಂದರ್ಭದಲ್ಲಿ ಅಲ್ಲಿ ಬಿದ್ದ ಕಸಗಳನ್ನು, ದೀಪದ ಕೆಳಗೆ ಬಿದ್ದ ಎಣ್ಣೆಗಳನ್ನು ಸ್ವಚ್ಛ ಮಾಡುತ್ತಿದ್ದಾರೆ.
“ದೀಪೋತ್ಸವದಂದು ಮಧ್ಯರಾತ್ರಿ ಒಂದು ಗಂಟೆಯವರೆಗೆ ದೀಪಗಳು ಬೆಳಗಿವೆ. ದೀಪಗಳು ಆರಿದಂತೆ ನಗರಪಾಲಿಕೆ ಸದಸ್ಯರುಗಳು ಸ್ವಚ್ಛತಾ ಕಾರ್ಯವನ್ನು ಆರಂಭಿಸಿದರು. ಮರಳನ್ನು ಬಳಸಿ ದೀಪಗಳ ಕೆಳಗೆಬಿದ್ದ ಎಣ್ಣೆಗಳನ್ನು ಸ್ವಚ್ಛ ಮಾಡಲಾಗಿದೆ” ಎಂದು ಅಯೋಧ್ಯಾ ಮಹಾನಗರಪಾಲಿಕೆಯ ಕಮಿಷನರ್ ಹರೀಶ್ ಚಂದ್ರ ಸಿಂಗ್ ಹೇಳಿದ್ದಾರೆ.
ಸುಮಾರು 800 ಮಂದಿ ಪಾಲಿಕೆಯ ಸದಸ್ಯರುಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಭಾನುವಾರ ಸಂಜೆ ಸ್ವಚ್ಛತಾ ಕಾರ್ಯ ಮುಕ್ತಾಯವಾಗಿದೆ.
ದೀಪೋತ್ಸವ ಸಂದರ್ಭದಲ್ಲಿ ಸುಮಾರು 6 ಲಕ್ಷ ದೀಪಗಳನ್ನು ಉರಿಸಿದ್ದಕ್ಕಾಗಿ ಅಯೋಧ್ಯಾ ದೀಪೋತ್ಸವವು ಗಿನ್ನಿಸ್ ಬುಕ್ ಅಫ್ ರೆಕಾರ್ಡ್ಸ್ಗೆ ಸೇರ್ಪಡೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.