ನವದೆಹಲಿ: ಭಾರತದ ಸಂಸತ್ತನ್ನು ಪುನರಾಭಿವೃದ್ಧಿಗೊಳಿಸುವ ಮಹತ್ವದ ಕಾಂಟ್ರ್ಯಾಕ್ಟ್ ಅನ್ನು ಅಹ್ಮದಾಬಾದ್ ಮೂಲದ ಎಚ್ಸಿಪಿ ಡಿಸೈನ್ ಪ್ಲ್ಯಾನಿಂಗ್ಗೆ ನೀಡಲಾಗಿದೆ. ಮಹತ್ವಾಕಾಂಕ್ಷೆಯ ಯೋಜನೆಗೆ ಆರ್ಕಿಟೆಕ್ಚರಲ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸಲಿದೆ. ಬಿಮಲ್ ಪಟೇಲ್ ನೇತೃತ್ವದ ಈ ಕಂಪನಿಯು ಗಾಂಧಿನಗರದ ಸೆಂಟ್ರಲ್ ವಿಸ್ಟಾ ಮತ್ತು ಅಹಮದಾಬಾದ್ನ ಸಬರಮತಿ ನದಿಯ ಮುಂಭಾಗದ ಪುನರಾಭಿವೃದ್ಧಿಯನ್ನು ಸಹ ಕೈಗೊಂಡಿತ್ತು.
229.7 ಕೋಟಿ ರೂಪಾಯಿ ವೆಚ್ಚದಲ್ಲಿ ಕಾಂಟ್ರ್ಯಾಕ್ಟ್ ಅನ್ನು ನೀಡಲಾಗಿದೆ. ಇದು ಅಂದಾಜು 448 ಕೋಟಿ ರೂಪಾಯಿಗಿಂತ ಸಾಕಷ್ಟು ಕಡಿಮೆಯಾಗಿದೆ ಎಂದು ನಗರಾಭಿವೃದ್ಧಿ ಸಚಿವ ಹರ್ದೀಪ್ ಪುರಿ ತಿಳಿಸಿದ್ದಾರೆ.
ಕನ್ಸಲ್ಟೆಂಟ್ ವೆಚ್ಚವು ಸಾಮಾನ್ಯವಾಗಿ ಒಟ್ಟು ವೆಚ್ಚದ ಶೇಕಡಾ 3 ರಿಂದ 5 ರಷ್ಟಾಗಿರುತ್ತದೆ ಎಂದು ಪುರಿ ಹೇಳಿದ್ದಾರೆ. ಪಾರಂಪರಿಕ ಕಟ್ಟಡಕ್ಕೆ ಯಾವುದೇ ಧಕ್ಕೆಯನ್ನು ತರದ ರೀತಿಯಲ್ಲಿ ಪುನರಾಭಿವೃದ್ಧಿ ಕಾರ್ಯವನ್ನು ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
2022ರ ಆಗಸ್ಟ್ ವೇಳೆಗೆ ಸಂಸತ್ತು ಕಟ್ಟಡದ ಪುನರಾಭಿವೃದ್ಧಿ ಕಾರ್ಯ ಮುಕ್ತಾಯಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.