ನವದೆಹಲಿ: ಕುಗ್ರಾಮ ಪ್ರದೇಶಗಳಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕಾರ್ಯನಿರ್ವಹಣೆ ಮಾಡುವ ಸಲುವಾಗಿ ಇದೇ ಮೊದಲ ಬಾರಿಗೆ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲಿಸ್ (ಐಟಿಬಿಪಿ) ಎರಡು ಹೆಲಿಕಾಪ್ಟರ್ಗಳನ್ನು ಗುತ್ತಿಗೆಗೆ ಪಡೆಯಲಿದೆ.
ದೂರದ ಮತ್ತು ಗುಡ್ಡಗಾಡು ಪ್ರದೇಶಗಳನ್ನು ತಲುಪಲು ಹೆಲಿಕಾಪ್ಟರ್ಗಳನ್ನು ಹೊಂದಬೇಕು ಎಂಬುದು ಐಟಿಬಿಪಿಯ ಬಹುದಿನಗಳ ಬೇಡಿಕೆಯಾಗಿತ್ತು. ಈ ನಿಟ್ಟಿನಲ್ಲಿ ಪ್ರಕ್ರಿಯೆ ಕೊನೆಯ ಹಂತದಲ್ಲಿದೆ ಎಂದು ಕೇಂದ್ರದ ರಾಜ್ಯ ಗೃಹ ಸಚಿವ ಜಿ. ಕಿಶನ್ ರೆಡ್ಡಿ ಗುರುವಾರ ಹೇಳಿದ್ದಾರೆ.
“ಗುತ್ತಿಗೆಗೆ ಐಟಿಬಿಪಿ ಶೀಘ್ರದಲ್ಲೇ ಎರಡು ಹೆಲಿಕಾಪ್ಟರ್ಗಳನ್ನು ಪಡೆಯಲಿದೆ ಮತ್ತು ಈ ಬಗೆಗಿನ ಪ್ರಕ್ರಿಯೆಯು ಪೂರ್ಣಗೊಳ್ಳುವ ಕೊನೆಯ ಹಂತದಲ್ಲಿದೆ. ಇದು ದೂರದ ಪ್ರದೇಶಗಳಲ್ಲಿನ ವಿವಿಧ ವಿಶೇಷ ಅವಶ್ಯಕತೆಗಳಿಗೆ ಸಹಾಯ ಮಾಡುತ್ತದೆ” ಎಂದಿದ್ದಾರೆ.
ಐಟಿಬಿಪಿಗೆ ಸಚಿವಾಲಯವು ಹೆಚ್ಚು ಶಕ್ತಿಶಾಲಿ SUVಗಳನ್ನು ಈಗಾಗಲೇ ಒದಗಿಸಿದೆ ಮತ್ತು ಇಂತಹ ವಾಹನಗಳ ಸೇರ್ಪಡೆ ಇನ್ನೂ ಮುಂದುವರೆದಿದೆ ಎಂದಿದ್ದಾರೆ.
“ಕಳೆದ ನಾಲ್ಕು ವರ್ಷಗಳಲ್ಲಿ ಐಟಿಬಿಪಿಗೆ ಬಿಒಪಿ ವಿಶೇಷ ವಾನಹಗಳ ಹೊರತಾಗಿಯೂ, ಆಧುನೀಕರಣ ಯೋಜನೆ ಹಂತ-2ರ ಅನ್ವಯ ಹೆಚ್ಚು ಶಕ್ತಿಶಾಲಿ ಮತ್ತು ಇತರ ಪರಿಕರಗಳನ್ನು ಪೂರೈಕೆ ಮಾಡಿದ್ದೇವೆ. ಈ ವಾಹನಗಳನ್ನು ಸುಮಾರು 50 ಕೋಟಿ ರೂಪಾಯಿ ವೆಚ್ಚದಲ್ಲಿ ಖರೀದಿ ಮಾಡಲಾಗಿದೆ. ಇದು ಐಟಿಬಿಪಿಯ ಸಾರಿಗೆ ಅಂಗದ ಚಿತ್ರಣವನ್ನು ಬದಲಾಯಿಸಿದೆ” ಎಂದು ರೆಡ್ಡಿ ಹೇಳಿದ್ದಾರೆ.
ಐಟಿಬಿಪಿ ಬಲವನ್ನು ಆಧುನೀಕರಿಸಲು ಮತ್ತು ಅದಕ್ಕೆ ಹೆಚ್ಚಿನ ಶಕ್ತಿಯನ್ನು ನೀಡಲು ಗೃಹ ಸಚಿವಾಲಯ ಅನೇಕ ಉಪಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಹೇಳಿದ್ದಾರೆ.
“ನಾವು 9,000 ಅಡಿ ಮತ್ತು ಅದಕ್ಕಿಂತ ಹೆಚ್ಚಿನ ಎತ್ತರದಲ್ಲಿ ನಿಯೋಜಿತಗೊಂಡಿರುವ ಯೋಧರಿಗೆ ಚಳಿ ತಡೆಯುವ ಸಮವಸ್ತ್ರ ಮತ್ತು ಪರ್ವತಾರೋಹಣ ಸಾಧನಗಳನ್ನು ಒದಗಿಸಿದ್ದೇವೆ. ಹಳೆಯ ಶಸ್ತ್ರಾಸ್ತ್ರಗಳ ಬದಲಾಗಿ ಹೊಸ ಶಸ್ತ್ರಾಸ್ತ್ರಗಳನ್ನು ಒದಗಿಸಿದ್ದೇವೆ ಮತ್ತು ಖರೀದಿ ಪ್ರಕ್ರಿಯೆ ಇನ್ನೂ ಮುಂದುವರೆದಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.