ನವದೆಹಲಿ: ಕೇಂದ್ರ ಸರ್ಕಾರವು ಸೋಮವಾರ ನಡೆದ ರಕ್ಷಣಾ ಸ್ವಾಧೀನ ಪರಿಷತ್ತಿ (ಡಿಎಸಿ)ನ ಸಭೆಯಲ್ಲಿ ಭಾರತೀಯ ಖಾಸಗಿ ರಕ್ಷಣಾ ಸಂಸ್ಥೆಗಳಿಂದ ರೂ.3,300 ಕೋಟಿ ರೂ.ಗಳ ಮೌಲ್ಯದ ಉಪಕರಣಗಳನ್ನು ಖರೀದಿಸುವ ಪ್ರಸ್ತಾಪಕ್ಕೆ ಅನುಮೋದನೆಯನ್ನು ನೀಡಿದೆ.
ಖರೀದಿಯು, ಮೂರನೇ ತಲೆಮಾರಿನ ಆ್ಯಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಗಳು ಮತ್ತು ಟಿ -72 ಮತ್ತು ಟಿ -90 ಟ್ಯಾಂಕ್ಗಳಿಗೆ ಆಕ್ಸಿಲಿಯರಿ ಪವರ್ ಯುನಿಟ್, ಪರ್ವತ ಮತ್ತು ಎತ್ತರದ ಪ್ರದೇಶಗಳಿಗೆ ಎಲೆಕ್ಟ್ರಾನಿಕ್ ಯುದ್ಧ ವ್ಯವಸ್ಥೆಗಳನ್ನೂ ಸೇರಿವೆ.
ಸಶಸ್ತ್ರ ಪಡೆಗಳಿಗೆ ಸಲಕರಣೆಗಳ ಖರೀದಿಯನ್ನು ತ್ವರಿತಗೊಳಿಸುವ ಸಲುವಾಗಿ ಡಿಎಸಿಯ ಸಭೆಯನ್ನು ನಡೆಸಲಾಗಿದ್ದು, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಈ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಇದೇ ಮೊದಲ ಬಾರಿಗೆ ರಕ್ಷಣಾ ಸಚಿವಾಲಯವು, ಭಾರತೀಯ ಖಾಸಗಿ ರಕ್ಷಣಾ ಉದ್ಯಮಕ್ಕೆ ರಕ್ಷಣಾ ಸಲಕರಣೆಗಳನ್ನು ವಿನ್ಯಾಸಗೊಳಿಸಲು, ಅಭಿವೃದ್ಧಿಪಡಿಸಲು ಮತ್ತು ತಯಾರಿಸಲು ಆಫರ್ ನೀಡಿದೆ ಎಂದು ಸಚಿವಾಲಯದ ಹೇಳಿಕೆ ತಿಳಿಸಿದೆ.
ಅಧಿಕಾರಿಗಳ ಪ್ರಕಾರ, ಡಿಎಸಿ ಸಭೆಯಲ್ಲಿ ಅನುಮೋದನೆಗೊಳಪಟ್ಟ ಮೂರು ಯೋಜನೆಗಳನ್ನು ಭಾರತದಲ್ಲಿ ಸ್ಥಳೀಯವಾಗಿ ವಿನ್ಯಾಸಗೊಳಿಸಲಾಗುತ್ತದೆ, ಅಭಿವೃದ್ಧಿಪಡಿಸಲಾಗುತ್ತದೆ ಮತ್ತು ತಯಾರಿಸಲಾಗುತ್ತದೆ. ಮೊದಲ ಎರಡು ಯೋಜನೆಗಳಲ್ಲಿ ಮೂರನೇ ತಲೆಮಾರಿನ ಆ್ಯಂಟಿ-ಟ್ಯಾಂಕ್ ಗೈಡೆಡ್ ಕ್ಷಿಪಣಿಗಳು ಮತ್ತು ಟಿ -72 ಮತ್ತು ಟಿ -90 ಟ್ಯಾಂಕ್ಗಳಿಗೆ ಸಹಾಯಕ ವಿದ್ಯುತ್ ಘಟಕಗಳು ಸೇರಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.