ನವದೆಹಲಿ: ಭಾರತದಲ್ಲಿ ಡಿಜಿಟಲ್ ಮತ್ತು ನಗದುರಹಿತ ಪಾವತಿ ಪರಿಸರ ವ್ಯವಸ್ಥೆಗೆ ಪ್ರಮುಖ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರವು, ಸೋಮವಾರ BHIM 2.0 ಯುನಿವರ್ಸಲ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಅನ್ನು ಬಿಡುಗಡೆ ಮಾಡಿದೆ.
ನ್ಯಾಷನಲ್ ಪೇಮೆಂಟ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್ಪಿಸಿಐ) 2016ರಲ್ಲಿ ಅಭಿವೃದ್ಧಿಪಡಿಸಿದ BHIM 2.0 ಹೆಚ್ಚುವರಿ ಭಾಷಾ ಬೆಂಬಲ ಮತ್ತು ವಿಸ್ತಾರಗೊಂಡ ವಹಿವಾಟು ಮಿತಿಗಳನ್ನು ಒಳಗೊಂಡಂತೆ ಹಲವಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.
BHIM ನ ಹೊಸ ಆವೃತ್ತಿಯು ಅಸ್ತಿತ್ವದಲ್ಲಿರುವ 13 ಭಾಷೆಗೆ ಹೆಚ್ಚುವರಿಯಾಗಿ ಮೂರು ಭಾಷೆಗಳನ್ನು ಬೆಂಬಲಿಸಿದೆ. ಅದೆಂದರೆ ಕೊಂಕಣಿ, ಭೋಜ್ಪುರಿ ಮತ್ತು ಹರಿಯಾನ್ವಿ.
ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಈ ಆ್ಯಪ್ಗೆ ಲಿಂಕ್ ಮಾಡಿಕೊಳ್ಳಬಹುದು, ವ್ಯವಹಾರ ಕೇಂದ್ರಗಳಿಂದ ಇತರೆ ಆ್ಯಪ್ಗಳಂತೆ ವಿಶೇಷ ಕೊಡುಗೆಗಳನ್ನು ಪಡೆಯಬಹುದು.
ಅಪ್ಲಿಕೇಶನ್ನಲ್ಲಿನ ಹೊಸ ಲಕ್ಷಣಗಳು ಆರಂಭಿಕ ಸಾರ್ವಜನಿಕ ಕೊಡುಗೆಗಳಲ್ಲಿ (Initial Public Offerings (IPOs)) ಹೂಡಿಕೆ ಮತ್ತು ಅರ್ಜಿ ಸಲ್ಲಿಸುವ ಆಯ್ಕೆಗಳು, ಹಣವನ್ನು ಉಡುಗೊರೆಯಾಗಿ ನೀಡುವುದು, ಅನೇಕ ಬ್ಯಾಂಕ್ ಖಾತೆಗಳನ್ನು ಲಿಂಕ್ ಮಾಡುವುದು ಇತ್ಯಾದಿಗಳನ್ನು ಒಳಗೊಂಡಿದೆ. ಅಪ್ಲಿಕೇಶನ್ ದೇಣಿಗೆಗಾಗಿ ಮೀಸಲಾದ ಗೇಟ್ವೇಯನ್ನು ಸಹ ಹೊಂದಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಆಯೋಜಿಸಿದ್ದ ಸ್ಟಾರ್ಟ್ಅಪ್ ಶೃಂಗಸಭೆಯಲ್ಲಿ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಅವರು ಅತ್ಯಾಧುನಿಕ ಪಾವತಿ ವ್ಯವಸ್ಥೆಯನ್ನು ಬಿಡುಗಡೆ ಮಾಡಿದರು. ರಾಷ್ಟ್ರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಸ್ಟಾರ್ಟ್ಅಪ್ ಆರ್ಥಿಕತೆಗೆ ಬೆಂಬಲವನ್ನು ನೀಡುವ ಸಲುವಾಗಿ ಸ್ಟಾರ್ಟ್ಅಪ್ ಹಬ್ ಪೋರ್ಟಲ್ ಅನ್ನು ಸಹ ಪ್ರಾರಂಭಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.