ಪಣಜಿ: ಭಾರತೀಯ ಸೇನೆಯ ಬಿಶ್ವರ್ಜಿತ್ ಸಿಂಗ್ ಸೈಖೋಮ್ ಅವರು ಭಾನುವಾರ ಗೋವಾ ರಾಜಧಾನಿ ಪಣಜಿಯಲ್ಲಿ ನಡೆದ ದೇಶದ ಮೊದಲ ಐರನ್ಮ್ಯಾನ್ (IRONMAN) 70.3 ಟ್ರಯಥ್ಲಾನ್ನಲ್ಲಿ ಪ್ರಥಮ ಸ್ಥಾನವನ್ನು ಗಳಿಸಿ ಇತಿಹಾಸವನ್ನು ಬರೆದಿದ್ದಾರೆ.
ಬಾಂಬೆ ಸ್ಯಾಪ್ಪರ್ಸ್ನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿರುವ ಪುಣೆ ಮೂಲದ ಹವಲ್ದಾರ್ ಸೈಖೋಮ್ ಅವರು, ಐರನ್ಮ್ಯಾನ್ 70.3 ಅನ್ನು 4 ಗಂಟೆ 42 ನಿಮಿಷ 44 ಸೆಕೆಂಡುಗಳಲ್ಲಿ ಪೂರ್ಣಗೊಳಿಸಿದರು.
ಎರಡನೇ ಸ್ಥಾನವನ್ನು ಐಐಟಿ ಬಾಂಬೆಯ ಹಳೆಯ ವಿದ್ಯಾರ್ಥಿ ನಿಹಾಲ್ ಬೇಗ್ ಅವರು ಪಡೆದುಕೊಂಡಿದ್ದಾರೆ. 4 ಗಂಟೆ 47 ನಿಮಿಷ 47 ಸೆಕೆಂಡುಗಳಲ್ಲಿ ಅವರು ಟ್ರಯ್ಲಥಾನ್ ಅನ್ನು ಪೂರ್ಣಗೊಳಿಸಿದರು. ಮಹೇಶ್ ಲೌರೆಂಬಮ್ ಟ್ರಯಥ್ಲಾನ್ ಅನ್ನು 4 ಗಂಟೆ 52 ನಿಮಿಷಗಳಲ್ಲಿ ಪೂರ್ಣಗೊಳಿಸಿ ಮೂರನೇ ಸ್ಥಾನ ಪಡೆದರು.
ಗೋವಾದ ಕೆಲವು ಅಪ್ರತಿಮ ಸ್ಥಳಗಳಲ್ಲಿ 1.9 ಕಿ.ಮೀ ಈಜು, 90 ಕಿ.ಮೀ ಸೈಕ್ಲಿಂಗ್ ಮತ್ತು 21 ಕಿ.ಮೀ ಓಟವನ್ನು ಪೂರ್ಣಗೊಳಿಸುವ ಸವಾಲನ್ನು ಸ್ಪರ್ಧಿಗಳಿಗೆ ನೀಡಲಾಗಿತ್ತು.
ಸ್ವಿಟ್ಜರ್ಲ್ಯಾಂಡಿನ ಪಬ್ಲೋ ಎರಟ್ ಅವರನ್ನು ಸೋಲಿಸಿದ್ದು ಸೈಖೋಮ್ ಅವರಿಗೆ ಅತೀವ ಸಂತೋಷವನ್ನು ಉಂಟು ಮಾಡಿದೆ. ಪಬ್ಲೋ ಅವರು ಟ್ರಯ್ಲಥಾನಿನ ಅತೀ ಪ್ರಭಾವಿ ಸ್ಪರ್ಧಿಯಾಗಿದ್ದರು, ಆದರೆ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.
“ಹಲವು ವರ್ಷಗಳಿಂದ ಪ್ಯಾಬ್ಲೋನನ್ನು ಸೋಲಿಸುವುದು ನನ್ನ ಗುರಿಯಾಗಿತ್ತು. ಗೋವಾದಲ್ಲಿ 2015 ರಲ್ಲಿ ನಡೆದ ಟ್ರಯಥ್ಲಾನ್ನಲ್ಲಿ ಪ್ಯಾಬ್ಲೊ ವಿಜೇತರಾಗಿದ್ದರು. ಕಳೆದ ಕೆಲವು ವರ್ಷಗಳಿಂದ ಅವರು ಸತತವಾಗಿ ಜಯಗಳಿಸುತ್ತಿದ್ದಾರೆ. ಈ ಸ್ಪರ್ಧೆ ಅವರನ್ನು ಗೋವಾದಲ್ಲಿ ಸೋಲಿಸುವುದು ನನ್ನ ಗುರಿಯಾಗಿತ್ತು. ಗುರಿಯನ್ನು ತಲುಪಿದ್ದು ನನಗೆ ನಿಜಕ್ಕೂ ಸಂತೋಷವನ್ನು ತಂದಿದೆ”ಎಂದು ಸೈಖೋಮ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.