ಭುವನೇಶ್ವರ: ದೇಶದಲ್ಲಿರುವ ಅಕ್ರಮ ನಿವಾಸಿಗಳಿಂದ ಮುಕ್ತಿಯನ್ನು ಪಡೆಯಲು ದೇಶದಾದ್ಯಂತ ನ್ಯಾಷನಲ್ ರಿಜಿಸ್ಟರ್ ಆಫ್ ಸಿಟಿಜನ್ಸ್ ಅನ್ನು ತರುವುದು ಅತ್ಯಗತ್ಯವಾಗಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ಭಯ್ಯಾಜಿ ಜೋಶಿ ಅವರು ಹೇಳಿದ್ದಾರೆ.
ಭುವನೇಶ್ವರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಭಾರತದಲ್ಲಿ ಎನ್ಆರ್ಸಿಯನ್ನು ತರುವುದು ಅತ್ಯಗತ್ಯವಾಗಿದೆ. ಅಪಾರ ಸಂಖ್ಯೆಯ ಅಕ್ರಮ ನಿವಾಸಿಗಳು ಭಾರತದಲ್ಲಿ ಬೀಡು ಬಿಟ್ಟಿದ್ದಾರೆ ಮತ್ತು ಅವರನ್ನು ಗುರುತಿಸುವ ಅಗತ್ಯವಿದೆ. ನಮ್ಮ ಸರ್ಕಾರಗಳು ಮೊದಲು ತನ್ನ ನಾಗರಿಕ ಹಿತಾಸಕ್ತಿಯತ್ತ ಗಮನವನ್ನು ನೀಡಬೇಕು” ಎಂದಿದ್ದಾರೆ.
“ದೇಶ ದ್ರೋಹಿಗಳನ್ನು ಪತ್ತೆ ಹಚ್ಚುವುದು, ದೇಶದ್ರೋಹಿ ಚಟುವಟಿಕೆಗಳನ್ನು ಹತ್ತಿಕ್ಕುವುದು ಸರ್ಕಾರದ ಪ್ರಾಥಮಿಕ ಕರ್ತವ್ಯವಾಗಿರಬೇಕು” ಎಂದು ಅವರು ಹೇಳಿದ್ದಾರೆ.
“ಎನ್ಆರ್ಸಿ ಯಾವ ಸಮುದಾಯದ ವಿರುದ್ಧವೂ ಅಲ್ಲ, ಅಕ್ರಮವಾಗಿ ನಮ್ಮ ದೇಶಕ್ಕೆ ಆಗಮಿಸುವವರು ನಮ್ಮ ನಾಗರಿಕರಲ್ಲ, ಅವರು ಅಕ್ರಮ ನಿವಾಸಿಗಳು ಎಂಬುದು ನಮ್ಮ ನಂಬಿಕೆ. ಭಾರತೀಯರನ್ನು ಪರಿಗಣಿಸಬೇಕು, ಭಾರತೀಯರಲ್ಲದವರನ್ನು ಹೊರಗೆ ಕಳುಹಿಸಬೇಕು. ಅಕ್ರಮ ವಲಸಿಗರ ವಿರುದ್ಧ ಕ್ರಮ ಕೈಗೊಳ್ಳುವುದು ಸರ್ಕಾರದ ಜವಾಬ್ದಾರಿ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.